Friday, December 12, 2025

75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್ ಗೆ ಡಬಲ್ ಧಮಾಕ: ತಲೈವಾ ಪಡೆಯಪ್ಪ ಸಿನಿಮಾ ರೀ ರಿಲೀಸ್ ಸಂಭ್ರಮ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಲೈವಾ 75ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಸಿನಿಜರ್ನಿಗೆ 50 ವರ್ಷ ತುಂಬಿದೆ. ಈ ಸ್ಪೆಷಲ್ ಮೂಮೆಂಟ್ ನ ಸೆಲೆಬ್ರೇಟ್ ಮಾಡ್ಲಿಕ್ಕೆ ಪಡೆಯಪ್ಪ ಸಿನಿಮಾ ರೀ ರಿಲೀಸ್ ಆಗಿದೆ.

ಇದು ರಜನಿಕಾಂತ್ ಸಿನಿಕರೀಯರ್​ ನ ಸುವರ್ಣ ವರ್ಷವೂ ಹೌದು. ಇಂಥಾ ಸ್ಪೆಷಲ್ ಟೈಂನಲ್ಲಿ ತಲೈವಾ ಒಂದು ಮರೆಯದ ಗಿಫ್ಟ್ ಕೊಟ್ಟಿದ್ದಾರೆ. ಪಡೆಯಪ್ಪ ಸಿನಿಮಾ ತೆರೆಕಂಡು 25 ವರ್ಷ ತುಂಬಿದ್ದು, ಪಡೆಯಪ್ಪನ ಸ್ಟೈಲ್​ನಲ್ಲೇ ರಜನಿ ಫ್ಯಾನ್ಸ್ ಎದುರು ಎಂಟ್ರಿ ಕೊಟ್ಟಿದ್ದಾರೆ.

ಪಡೆಯಪ್ಪ ರಜನಿಕಾಂತ್ ಕರೀಯರ್​ ನ ಬಿಗ್ಗೆಸ್ಟ್ ಹಿಟ್ ಸಿನಿಮಾಗಳಲ್ಲಿ ಒಂದು. 1999ರ ಯುಗಾದಿ ಹಬ್ಬದ ದಿನ ತೆರೆಗೆ ಬಂದಿದ್ದ ಈ ಸಿನಿಮಾ ತಮಿಳುನಾಡಿನಾದ್ಯಂತ ಜಯಭೇರಿ ಬಾರಿಸಿತ್ತು. ಅಂದು ಹೆಣ್ಣುಮಕ್ಕಳು ಈ ಸಿನಿಮಾ ನೋಡಲಿಕ್ಕೆ ಚಿತ್ರಮಂದಿರಗಳ ಗೇಟ್​ಗಳನ್ನೇ ಮುರಿದುಹಾಕಿದ್ದರು.

ಸ್ಟೈಲಿಶ್ ಪಡೆಯಪ್ಪನಾಗಿ ರಜನಿಕಾಂತ್, ದುರಂಹಕಾರದ ಹೆಣ್ಣು ನೀಲಾಂಬರಿ ಪಾತ್ರದಲ್ಲಿ ರಮ್ಯಾ ಕೃಷ್ಣ, ಸೌಮ್ಯ ಸ್ವಭಾವದ ವಸುಂಧರಾ ಪಾತ್ರದಲ್ಲಿ ನಟಿ ಸೌಂದರ್ಯ ಅಮೋಘವಾಗಿ ನಟಿಸಿದ್ರು. ಕೆ.ಎಸ್ ರವಿಕುಮಾರ್ ಡೈರೆಕ್ಟ್ ಮಾಡಿದ್ದ ಈ ಸಿನಿಮಾ ಬರೊಬ್ಬರಿ 86 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತ್ತು. ಆವತ್ತಿಗೆ ತಮಿಳು ಚಿತ್ರರಂಗದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ್ದ ಚಿತ್ರ ಅನ್ನೋ ದಾಖಲೆ ಬರೆದಿತ್ತು.

ಇನ್ನೂ ಮತ್ತೊಂದು ಖುಷಿ ವಿಷ್ಯ ಅಂದ್ರೆ ಪಡೆಯಪ್ಪ-2 ಬರುತ್ತೆ ಅನ್ನೋ ಖುಷ್ ಖಬರ್​​​ನ ಖುದ್ದು ರಜನಿಕಾಂತ್ ಹಂಚಿಕೊಂಡಿದ್ದಾರೆ.

error: Content is protected !!