ಬೆಳಗಿನ ಉಪಹಾರ ಅಂದರೆ ಬಹುತೇಕ ಮನೆಗಳಲ್ಲಿ ಮೊದಲು ನೆನಪಾಗೋದು ಉಪ್ಪಿಟ್ಟು. ಅದಕ್ಕೆ ಮುಖ್ಯವಾದ ಬಾಂಬೆ ರವೆ ಮನೆಗಳಲ್ಲಿ ಹೆಚ್ಚಾಗಿ ಸಂಗ್ರಹವಾಗಿರುತ್ತೆ. ಆದರೆ ಸ್ವಲ್ಪ ನಿರ್ಲಕ್ಷ್ಯವಾದರೂ ರವೆಗಳಲ್ಲಿ ಹುಳು ಬಿದ್ದು, ಸಂಪೂರ್ಣ ಪದಾರ್ಥವೇ ವ್ಯರ್ಥವಾಗುತ್ತದೆ. ಒಮ್ಮೆ ಹುಳು ಕಂಡುಬಂದರೆ ತೊಳೆದು, ಬೇಯಿಸಿದರೂ ತಿನ್ನಲು ಮನಸ್ಸಾಗುವುದಿಲ್ಲ. ಹೀಗಾಗಿ ಮೊದಲಿನಿಂದಲೇ ಜಾಗ್ರತೆ ವಹಿಸಿದರೆ ರವೆಯನ್ನು ದೀರ್ಘಕಾಲ ಸುರಕ್ಷಿತವಾಗಿ ಬಳಸಬಹುದು.
- ಗಾಜಿನ ಬಾಟಲಿ ಬಳಸಿ: ರವೆಯನ್ನು ಯಾವಾಗಲೂ ಬಿಗಿಯಾಗಿ ಮುಚ್ಚುವ ಗುಣಮಟ್ಟದ ಗಾಜಿನ ಬಾಟಲಿಯಲ್ಲಿ ಇಡಿ. ಗಾಳಿ ಒಳಗೆ ಹೋಗದಂತೆ ನೋಡಿಕೊಂಡರೆ ಹುಳುಗಳ ಸಾಧ್ಯತೆ ಕಡಿಮೆಯಾಗುತ್ತದೆ.
- ಬೇ ಎಲೆಗಳ ಉಪಾಯ: ರವೆ ಪಾತ್ರೆಯಲ್ಲಿ 2–3 ಬೇ ಎಲೆ ಹಾಕಿ. ಅದರ ಸುವಾಸನೆ ಕೀಟಗಳನ್ನು ದೂರವಿಡುತ್ತದೆ ಮತ್ತು ರುಚಿಗೂ ಹಾನಿಯಾಗುವುದಿಲ್ಲ.
- ಫ್ರೀಜರ್ ವಿಧಾನ: ಹೊಸದಾಗಿ ತಂದ ರವೆಯನ್ನು 4–7 ದಿನ ಫ್ರೀಜರ್‌ನಲ್ಲಿ ಇಟ್ಟು ನಂತರ ಹೊರತೆಗೆದು ಒಣ ಸ್ಥಳದಲ್ಲಿ ಇಡಿ. ಇದರಿಂದ ಒಳಗಿರುವ ಮೊಟ್ಟೆಗಳು ನಾಶವಾಗುತ್ತವೆ.
- ಸಣ್ಣ ಪ್ರಮಾಣದಲ್ಲಿ ಖರೀದಿ: ದೀರ್ಘಕಾಲಕ್ಕೆ ರವೆ ಸಂಗ್ರಹಿಸುವ ಬದಲು 1–2 ತಿಂಗಳಿಗೆ ಸಾಕಾಗುವಷ್ಟು ಮಾತ್ರ ಖರೀದಿಸಿ.
- ಅಡುಗೆಮನೆಯ ಒಣತನ: ತೇವಾಂಶವಿಲ್ಲದ ಸ್ವಚ್ಛ ಶೆಲ್ಫ್‌ನಲ್ಲಿ ರವೆಯನ್ನು ಇಡುವುದು ಅತ್ಯಂತ ಮುಖ್ಯ.

