Sunday, December 14, 2025

Mehendi | ಕೈಗೆ ಮದರಂಗಿಯ ಕಲರ್ ಚೆನ್ನಾಗಿ ಬರ್ಬೇಕಾ? ಹಾಗಿದ್ರೆ ಈ ಟಿಪ್ಸ್ ಟ್ರೈ ಮಾಡಿ!

ಮದುವೆ ಸಂಭ್ರಮ ಶುರುವಾಗುತ್ತಿದ್ದಂತೆ ಕೈಗಳ ಮೇಲೆ ಅರಳುವ ಮೊದಲ ಅಲಂಕಾರವೇ ಮದರಂಗಿ. ಒಮ್ಮೆ ಕೇವಲ ಮದುವೆ ಸಂಪ್ರದಾಯಕ್ಕೆ ಸೀಮಿತವಾಗಿದ್ದ ಮದರಂಗಿ, ಇಂದು ಫ್ಯಾಷನ್ ಹಾಗೂ ಸ್ವ-ಅಭಿವ್ಯಕ್ತಿಯ ರೂಪವಾಗಿ ಬದಲಾಗಿದೆ. ಸಣ್ಣ ವಿನ್ಯಾಸದಿಂದ ಹಿಡಿದು ಭಾರೀ ಕಲಾಕೃತಿಗಳವರೆಗೆ, ಮದರಂಗಿ ಮಹಿಳೆಯರ ಕೈಗಳಿಗೆ ಹೊಸ ಜೀವ ತುಂಬುತ್ತದೆ. ಆದರೆ ಕಡು ಬಣ್ಣದ ಸುಂದರ ಮದರಂಗಿಗೆ ಸರಿಯಾದ ತಯಾರಿ ಮತ್ತು ಎಚ್ಚರಿಕೆ ಅಗತ್ಯ.

  • ಮದರಂಗಿ ಹಾಕುವ ಮೊದಲು ಕೈಗಳ ಮೇಲೆ ವ್ಯಾಕ್ಸಿಂಗ್ ಅಥವಾ ಶೇವಿಂಗ್ ಮಾಡಿದರೆ ಬಣ್ಣ ಚೆನ್ನಾಗಿ ಹಿಡಿಯದು. ಈ ಕೆಲಸವನ್ನು ಕನಿಷ್ಠ ಒಂದು ದಿನ ಮುಂಚಿತವಾಗಿ ಮಾಡುವುದು ಉತ್ತಮ.
  • ಕೈಗಳನ್ನು ಸಾಬೂನು ಬಳಸಿ ತೊಳೆಯುವ ಬದಲು ಹತ್ತಿ ಉಂಡೆಯಿಂದ ಸ್ವಚ್ಛಗೊಳಿಸಿದರೆ ಮದರಂಗಿ ಉತ್ತಮವಾಗಿ ಅಂಟುತ್ತದೆ.
  • ಮದರಂಗಿ ಹಾಕಿದ ನಂತರ ತಕ್ಷಣ ತೊಳೆಯುವ ಆತುರ ಬೇಡ. ಅದು ನೈಸರ್ಗಿಕವಾಗಿ ಒಣಗಲು ಬಿಡಬೇಕು.
  • ಲಿಂಬೆ ರಸ ಮತ್ತು ಸಕ್ಕರೆಯ ಮಿಶ್ರಣವನ್ನು ಮದರಂಗಿಯ ಮೇಲೆ ಹಚ್ಚಿದರೆ ಬಣ್ಣ ಗಾಢವಾಗುತ್ತದೆ.
  • ಲವಂಗದ ಹೊಗೆ ಅಥವಾ ಲವಂಗ ಎಣ್ಣೆ ಬಳಸುವುದರಿಂದ ಮದರಂಗಿಯ ಬಣ್ಣ ಇನ್ನಷ್ಟು ಗಾಢವಾಗುತ್ತದೆ.
  • ಮದರಂಗಿ ಪದರ ತೆಗೆಯುವಾಗ ಚಾಕು ಅಥವಾ ಬ್ಲೇಡ್ ಬಳಸಬೇಡಿ. ನಿಧಾನವಾಗಿ ಉಜ್ಜಿ ತೆಗೆಯಿರಿ.

ಸರಿಯಾದ ವಿಧಾನ ಅನುಸರಿಸಿದರೆ, ಮದರಂಗಿ ಕೇವಲ ಅಲಂಕಾರವಲ್ಲ, ಕೈಗಳ ಮೇಲೆ ಅರಳುವ ನೆನಪಿನ ಕಲೆಯಾಗುತ್ತದೆ.

error: Content is protected !!