ಮಗುವಿನೊಂದಿಗೆ ಪ್ರವಾಸಕ್ಕೆ ಹೋಗುವುದು ಸಂತೋಷದ ಅನುಭವವಾಗಬಹುದು, ಆದರೆ ಸರಿಯಾದ ಯೋಜನೆ ಇಲ್ಲದಿದ್ದರೆ ಅದು ಒತ್ತಡದ ಪ್ರಯಾಣವಾಗುವ ಸಾಧ್ಯತೆಯೂ ಇದೆ. ವಿಶೇಷವಾಗಿ ಚಿಕ್ಕ ಮಕ್ಕಳೊಂದಿಗೆ ಪ್ರಯಾಣ ಮಾಡುವಾಗ ಸಣ್ಣ ನಿರ್ಲಕ್ಷ್ಯವೂ ದೊಡ್ಡ ತೊಂದರೆಯಾಗಿ ಮಾರ್ಪಡಬಹುದು. ಆದ್ದರಿಂದ ಪ್ರವಾಸಕ್ಕೆ ಹೊರಡುವ ಮುನ್ನ ಕೆಲವು ಮುಖ್ಯ ವಿಷಯಗಳಿಗೆ ಗಮನ ನೀಡುವುದು ಅಗತ್ಯ.
- ಮಗುವಿನ ದಿನಚರಿಯನ್ನು ಲೆಕ್ಕಿಸದೇ ಪ್ರಯಾಣ ಯೋಜಿಸುವುದು ದೊಡ್ಡ ತಪ್ಪು. ನಿದ್ರೆ ಮತ್ತು ಊಟದ ಸಮಯ ವ್ಯತ್ಯಾಸವಾಗುವುದು ಮಗುವಿಗೆ ಅಸ್ವಸ್ಥತೆಯನ್ನುಂಟುಮಾಡುತ್ತದೆ.
- ಅಗತ್ಯ ಔಷಧಿಗಳು, ಡೈಪರ್‌ಗಳು ಮತ್ತು ಹೆಚ್ಚುವರಿ ಬಟ್ಟೆಗಳನ್ನು ತೆಗೆದುಕೊಳ್ಳದೇ ಹೊರಡುವುದು ತುರ್ತು ಪರಿಸ್ಥಿತಿಗೆ ಕಾರಣವಾಗಬಹುದು.
- ಹವಾಮಾನವನ್ನು ಪರಿಶೀಲಿಸದೇ ಪ್ಯಾಕಿಂಗ್ ಮಾಡುವುದು ಮಗುವಿನ ಆರೋಗ್ಯಕ್ಕೆ ಹಾನಿಕಾರಕ.
- ದೀರ್ಘ ಪ್ರಯಾಣದ ವೇಳೆ ವಿಶ್ರಾಂತಿ ವಿರಾಮಗಳನ್ನು ನೀಡದೇ ಹೋಗುವುದು ಮಗುವಿಗೆ ಕಿರಿಕಿರಿ ಉಂಟುಮಾಡುತ್ತದೆ.
- ಆಹಾರದ ವಿಷಯದಲ್ಲಿ ಅತಿಯಾದ ಪ್ರಯೋಗ ಮಾಡುವುದು ಜೀರ್ಣಕ್ರಿಯೆಗೆ ತೊಂದರೆ ಕೊಡಬಹುದು. ದಿನನಿತ್ಯ ಕೂಡುವ ಆಹಾರವನ್ನೇ ತೆಗೆದುಕೊಂಡು ಹೋಗಿ. ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಸುತ್ತಿರಿ.
- ಆಟದ ಸಾಮಾನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.

