ಹೊಸದಿಗಂತ ಡಿಜಿಟಲ್ ಡೆಸ್ಕ್:
|ತನ್ನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದರಿಂದ ಕೋಪಗೊಂಡ ಪ್ರಿಯಕರನೊಬ್ಬ ಮಾಜಿ ಪ್ರಿಯತಮೆಯ ಪತಿಗೆ ಆಕೆಯ ಖಾಸಗಿ ವಿಡಿಯೋವನ್ನು ಕಳುಹಿಸಿದ್ದರ ಪರಿಣಾಮ ನವವಿವಾಹಿತೆಯ ಬದುಕು ಇದೀಗ ಬೀದಿಗೆ ಬಿದ್ದಿದೆ.
20 ದಿನದ ಹಿಂದೆ ಸಂತ್ರಸ್ತ ಯುವತಿ ಯುವಕನೊಬ್ಬನ ಜೊತೆ ವಿವಾಹವಾಗಿದ್ದಳು. ಮಾಜಿ ಪ್ರಿಯಕರ ಅಂಬರೀಶ್ ಎಂಬಾತ ಪ್ರಿಯತಮೆಯ ಪತಿಗೆ ಪತ್ನಿಯ ಖಾಸಗಿ ವಿಡಿಯೋ ಕಳುಹಿಸಿದ್ದಾನೆ. ತನ್ನ ಪತ್ನಿಯ ಖಾಸಗಿ ವಿಡಿಯೋ ನೋಡುತ್ತಿದ್ದಂತೆ ಪತಿ ಆಕ್ರೋಶಗೊಂಡಿದ್ದು ತಾನೇ ಕಟ್ಟಿದ್ದ ತಾಳಿಯನ್ನು ತೆಗೆದು ತವರು ಮನೆಗೆ ಕಳುಹಿಸಿದ್ದಾನೆ. ಈ ಘಟನೆಯಿಂದ ಆತಂಕಗೊಂಡ ನವವಿವಾಹಿತೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಪಲಿಚೆರ್ಲು ಗ್ರಾಮದಲ್ಲಿರುವ ಮಾಜಿ ಪ್ರಿಯಕರ ಅಂಬರೀಶನ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾಳೆ.
ಘಟನೆ ಬೆನ್ನಲ್ಲೇ ಅಂಬರೀಶ್ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಅಂಬರೀಶನ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ಯುವತಿ ಅಂಬರೀಶನಿಂದ ನನ್ನ ಜೀವನ ಹಾಳಾಗಿದೆ. ಆತನೇ ನನ್ನ ಜೀವನವನ್ನು ಸರಿಸಪಡಿಸಬೇಕು. ನನಗೆ ನ್ಯಾಯ ಕೊಡಿಸಿ ಎಂದು ಡಾ. ಬಿಆರ್ ಅಂಬೇಡ್ಕರ್ ಭಾವಚಿತ್ರ ಹಿಡಿದು ಯುವತಿ ಪ್ರತಿಭಟನೆ ನಡೆಸುತ್ತಿದ್ದಾಳೆ.
ಆದರೆ ಅಂಬರೀಶ ಯುವತಿಯ ಜೊತೆಗಿದ್ದಾಗ ತೆಗೆದುಕೊಂಡ ಖಾಸಗಿ ವಿಡಿಯೋ ಮತ್ತು ಪೋಟೊಗಳನ್ನ ಆತ ಕಳುಹಿಸಲ್ಲ ಎಂದು ಹೇಳಲಾಗುತ್ತಿದೆ. ಅಂಬರೀಶ್ ಈ ವಿಡಿಯೋ ಹಾಗೂ ಫೋಟೋಗಳನ್ನು ಯುವತಿಯ ಗೆಳತಿ ಸುನಿಲ್ ಎಂಬಾತನಿಗೆ ಕಳುಹಿಸಿದ್ದನಂತೆ. ಸುನೀಲ್ ಆಕೆಯ ಮೇಲಿನ ವೈಯಕ್ತಿಕ ದ್ವೇಷದ ಕಾರಣಕ್ಕೆ ಅವುಗಳನ್ನು ಯುವತಿಯ ಗಂಡನಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ.

