Friday, December 19, 2025

ಭಾರತದ ಆರ್ಥಿಕತೆಗೆ ಡಬಲ್ ಬೂಸ್ಟ್! ನವೆಂಬರ್‌ನಲ್ಲಿ ರಫ್ತು ಏರಿಕೆ, ಆಮದು ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಆರ್ಥಿಕತೆ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಉತ್ತಮ ಸ್ಥಿತಿಯಲ್ಲಿರುವುದಕ್ಕೆ ಸ್ಪಷ್ಟ ನಿದರ್ಶನವನ್ನು ನೀಡುತ್ತಾ, 2024ರ ನವೆಂಬರ್ ತಿಂಗಳ ವ್ಯಾಪಾರ ದತ್ತಾಂಶವು ಭರ್ಜರಿ ಯಶಸ್ಸನ್ನು ಸಾಧಿಸಿದೆ. ಅಕ್ಟೋಬರ್‌ನಲ್ಲಿ ಶೇ. 11.8ರಷ್ಟು ಕುಸಿತ ಕಂಡಿದ್ದ ಭಾರತದ ಸರಕುಗಳ ರಫ್ತು ನವೆಂಬರ್‌ನಲ್ಲಿ ದಿಢೀರ್ ಶೇ. 19.38ರಷ್ಟು ಏರಿಕೆ ಕಂಡು, ಬರೋಬ್ಬರಿ 38.13 ಬಿಲಿಯನ್ ಡಾಲರ್‌ಗೆ ತಲುಪಿದೆ.

ಇದು 2022ರ ಜೂನ್ ತಿಂಗಳ ನಂತರ ಶೇಕಡಾವಾರು ಲೆಕ್ಕದಲ್ಲಿ ಭಾರತದ ರಫ್ತು ಕಂಡ ಅತಿಹೆಚ್ಚಳವಾಗಿದೆ. ಮತ್ತೊಂದು ಗಮನಾರ್ಹ ಅಂಶವೆಂದರೆ, ಕಳೆದ 10 ವರ್ಷಗಳಲ್ಲಿ ಯಾವುದೇ ನವೆಂಬರ್ ತಿಂಗಳಲ್ಲಿ ಭಾರತದ ರಫ್ತು 38 ಬಿಲಿಯನ್ ಡಾಲರ್ ಗಡಿಯನ್ನು ದಾಟಿ ಇರಲಿಲ್ಲ. ಈ ಮೂಲಕ ಭಾರತ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ನೆಲೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ರಫ್ತು ಭರ್ಜರಿಯಾಗಿ ಏರಿಕೆಯಾದ ಜೊತೆಗೆ, ಭಾರತದ ಸರಕುಗಳ ಆಮದು ಕೂಡಾ ತಗ್ಗಿದೆ. ನವೆಂಬರ್‌ನಲ್ಲಿ ಆಮದು ಶೇ. 1.88ರಷ್ಟು ಕಡಿಮೆಗೊಂಡು 62.66 ಬಿಲಿಯನ್ ಡಾಲರ್ ಮುಟ್ಟಿದೆ.

ಇದರ ಪರಿಣಾಮವಾಗಿ, ರಫ್ತು ಮತ್ತು ಆಮದು ನಡುವಿನ ಅಂತರವಾದ ವ್ಯಾಪಾರ ಕೊರತೆ 24.53 ಬಿಲಿಯನ್ ಡಾಲರ್‌ಗೆ ಇಳಿದಿದೆ. ಇದು ಕಳೆದ ಐದು ತಿಂಗಳಲ್ಲಿ ಕಂಡ ಅತ್ಯಂತ ಕಡಿಮೆ ವ್ಯಾಪಾರ ಕೊರತೆಯಾಗಿದ್ದು, ದೇಶದ ಆರ್ಥಿಕತೆಗೆ ಸಕಾರಾತ್ಮಕ ಬೆಳವಣಿಗೆಯಾಗಿದೆ. ಆಮದು ತಗ್ಗಲು ಮುಖ್ಯ ಕಾರಣ ಚಿನ್ನದ ಆಮದಿನಲ್ಲಿ ಆದ ಗಣನೀಯ ಇಳಿಕೆ ಎಂದು ವರದಿಯಾಗಿದೆ.

ಕೆಲ ತಿಂಗಳ ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು ‘ಡೆಡ್ ಎಕಾನಮಿ’ ಎಂದು ಕುಚೋದ್ಯ ಮಾಡಿದ್ದರು. ಆದರೆ, ಟ್ರಂಪ್ ಆಡಳಿತವು ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಟ್ಯಾರಿಫ್ ಹಾಕಿದ್ದರೂ, ನವೆಂಬರ್ ತಿಂಗಳಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಶೇ. 22.6ರಷ್ಟು ಏರಿದೆ!

ಭಾರತದ ರಫ್ತು ಕೇವಲ ಅಮೆರಿಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇತರೆ ಹಲವು ಪ್ರಮುಖ ದೇಶಗಳಿಗೆ ಆದ ರಫ್ತಿನಲ್ಲಿ ಅಸಾಮಾನ್ಯ ಏರಿಕೆಯಾಗಿದೆ.

ದೇಶರಫ್ತಿನಲ್ಲಿ ಶೇಕಡಾವಾರು ಏರಿಕೆ (ನವೆಂಬರ್‌ನಲ್ಲಿ)
ಸ್ಪೇನ್ಶೇ. 181.2
ಚೀನಾಶೇ. 90.0
ಹಾಂಗ್‌ಕಾಂಗ್ಶೇ. 35.5
ಅಮೆರಿಕಶೇ. 22.6
ಯುಎಇಶೇ. 13.2

error: Content is protected !!