Friday, December 19, 2025

ಕರುನಾಡ ಆಟಗಾರರಿಗೆ ಐಪಿಎಲ್ ಹರಾಜು ಶಾಕ್: ದುಬೆ ಮಾತ್ರ ಸೇಫ್, ಉಳಿದ 11 ಮಂದಿ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿನಲ್ಲಿ ಕರ್ನಾಟಕದ ಆಟಗಾರರಿಗೆ ಭಾರಿ ಹಿನ್ನಡೆಯಾಗಿದೆ. ಹರಾಜು ಪಟ್ಟಿಯಲ್ಲಿದ್ದ ರಾಜ್ಯದ ಒಟ್ಟು 12 ಆಟಗಾರರಲ್ಲಿ ಕೇವಲ ಪ್ರವೀಣ್ ದುಬೆ ಮಾತ್ರ ಮಾರಾಟವಾಗುವ ಮೂಲಕ ಅದೃಷ್ಟಶಾಲಿಯಾಗಿದ್ದಾರೆ. ಉಳಿದ 11 ಪ್ರತಿಭಾನ್ವಿತ ಆಟಗಾರರನ್ನು ಖರೀದಿಸಲು ಹತ್ತು ಫ್ರಾಂಚೈಸಿಗಳಲ್ಲಿ ಯಾರೊಬ್ಬರೂ ಆಸಕ್ತಿ ತೋರದಿರುವುದು ಕ್ರೀಡಾ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಕರ್ನಾಟಕದ ಅನುಭವಿ ಸ್ಪಿನ್ನರ್ ಪ್ರವೀಣ್ ದುಬೆ ಮೊದಲ ಸುತ್ತಿನಲ್ಲಿ ಕಡೆಗಣಿಸಲ್ಪಟ್ಟರೂ, ಅಂತಿಮ ಕ್ಷಣದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪಾಲಾದರು. ಇವರ ಮೂಲ ಬೆಲೆ 30 ಲಕ್ಷ ರೂ.ಗೆ ಪಂಜಾಬ್ ತಂಡ ಮಣೆ ಹಾಕಿದೆ.

ಹರಾಜಿನಲ್ಲಿ ಯಾವುದೇ ಫ್ರಾಂಚೈಸಿಗಳ ಗಮನ ಸೆಳೆಯದ ರಾಜ್ಯದ ಆಟಗಾರರ ವಿವರ ಇಲ್ಲಿದೆ:

ಆಟಗಾರರ ಹೆಸರುಮೂಲ ಬೆಲೆಸ್ಥಿತಿ
ಮಯಾಂಕ್ ಅಗರ್ವಾಲ್75 ಲಕ್ಷ ರೂ.ಮಾರಾಟವಾಗಿಲ್ಲ
ಅಭಿನವ್ ಮನೋಹರ್30 ಲಕ್ಷ ರೂ.ಮಾರಾಟವಾಗಿಲ್ಲ
ವಿದ್ವತ್ ಕಾವೇರಪ್ಪ30 ಲಕ್ಷ ರೂ.ಮಾರಾಟವಾಗಿಲ್ಲ
ಕೆ.ಸಿ ಕಾರ್ಯಪ್ಪ30 ಲಕ್ಷ ರೂ.ಮಾರಾಟವಾಗಿಲ್ಲ
ಮನೋಜ್ ಭಾಂಡಗೆ30 ಲಕ್ಷ ರೂ.ಮಾರಾಟವಾಗಿಲ್ಲ
ಜಗದೀಶ್ ಸುಚಿತ್30 ಲಕ್ಷ ರೂ.ಮಾರಾಟವಾಗಿಲ್ಲ
ಕೆ.ಎಲ್ ಶ್ರೀಜಿತ್30 ಲಕ್ಷ ರೂ.ಮಾರಾಟವಾಗಿಲ್ಲ
ವಿದ್ಯಾಧರ ಪಾಟೀಲ್30 ಲಕ್ಷ ರೂ.ಮಾರಾಟವಾಗಿಲ್ಲ
ಅಭಿಲಾಷ್ ಶೆಟ್ಟಿ30 ಲಕ್ಷ ರೂ.ಮಾರಾಟವಾಗಿಲ್ಲ
ಶ್ರೀವತ್ಸ ಆಚಾರ್ಯ30 ಲಕ್ಷ ರೂ.ಮಾರಾಟವಾಗಿಲ್ಲ
ಮ್ಯಾಕ್ನಿಲ್ ನೊರೊನ್ಹಾ30 ಲಕ್ಷ ರೂ.ಮಾರಾಟವಾಗಿಲ್ಲ
error: Content is protected !!