Thursday, December 18, 2025

ಮೆಕ್ಸಿಕೋ ಸದನದಲ್ಲೇ ಜುಟ್ಟು ಹಿಡಿ ಎಳೆದಾಡಿದ ನಾಯಕಿಯರು: ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಸದನದಲ್ಲಿ ಗುದ್ದಾಟ, ಬಡಿದಾಟ ಹೊಸದೇನಲ್ಲ. ಆದರೆ ಮೆಕ್ಸಿಕೋದಲ್ಲೂ ಜನಪ್ರತಿನಿಧಿಗಳು ಸದನದಲ್ಲೇ ಬಡಿದಾಡಿಕೊಂಡ ಘಟನೆ ವರದಿಯಾಗಿದೆ.

ಮಹಿಳಾ ಜನಪ್ರತಿನಿಧಿಗಳು ಜುಟ್ಟು ಹಿಡಿದು ಎಳೆದಾಡಿದ್ದಾರೆ. ಅಧಿವೇಶನದ ನಡುವೆ ಇವರ ಬಡಿದಾಟ ಜೋರಾಗಿದೆ. ಈ ಮೂಲಕ ಮೆಕ್ಸಿಕೋ ಇದೀಗ ವಿಶ್ವದಲ್ಲೇ ಭಾರಿ ಸದ್ದು ಮಾಡುತ್ತಿದೆ. ಮೆಕ್ಸಿನ್ ಕ್ಯಾಪಿಟಲ್ ಕಾಂಗ್ರೆಸ್ (ಸದನ)‌ನಲ್ಲಿ ಈ ಗುದ್ದಾಟ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಹಲವರು ಕಮೆಂಟ್ ಮಾಡಿದ್ದಾರೆ.

ಮೆಕ್ಸಿಕೋದ ನ್ಯಾಷನಲ್ ಆ್ಯಕ್ಷನ್ ಪಾರ್ಟಿ (PAN) ಹಾಗೂ ಲೆಫ್ಟಿಸ್ಟ್ ಮೊರೇನಾ ಪಾರ್ಟಿ (LMP)ನಡುವೆ ಜಟಾಪಟಿ ನಡೆದಿದೆ. ಮೆಕ್ಸಿಕೋ ಸಿಟಿ ಕಾಂಗ್ರೆಸ್‌ನಲ್ಲಿ ನಡೆಯುತ್ತಿದ್ದ ಸದನದಲ್ಲಿ ಈ ಜಡೆ ಜಗಳ, ತಳ್ಳಾಟ, ನೂಕಾಟ, ಬಡಿದಾಟ ನಡೆದಿದೆ.

https://www.google.com/search?q=VIRAL+PARLIAMENT+FIGHT%3A+FEMALE+Lawmakers+Pull+Hair%2C+Shov&rlz=1C1VDKB_enIN1140IN1140&oq=VIRAL+PARLIAMENT+FIGHT%3A+FEMALE+Lawmakers+Pull+Hair%2C+Shov&gs_lcrp=EgZjaHJvbWUyBggAEEUYOdIBBzQyM2owajeoAgCwAgA&sourceid=chrome&ie=UTF-8#fpstate=ive&vld=cid:7ebfb1fc,vid:F-p-_kspBR0,st:0

ಈ ಜಟಾಪಟಿಯಲ್ಲಿ ಎರಡು ಪಕ್ಷದ ಹಲವು ನಾಯಕರು ಸೇರಿಕೊಂಡಿದ್ದಾರೆ. ಬಹುತೇಕ ನಾಯಕರು ನಿಯಮ ಉಲ್ಲಂಘಿಸಿದ್ದಾರೆ. ಮಹಿಳಾ ನಾಯಕಿಯರು ಅಧಿವೇಶನದಲ್ಲಿ ಜಡೆ ಹಿಡಿದು ಏಳೆದಾಡಿದ್ದಾರೆ. ಮಹಿಳಾ ನಾಯಕಿಯರ ಬಡಿದಾಟಕ್ಕೆ ಇತರ ನಾಯಕರು ಸೇರಿಕೊಂಡಿದ್ದಾರೆ. ಇದರಿಂದ ಅಧಿವೇಶನ ರಣಾಂಗಣವಾಗಿದೆ.

ಸಿಟಿ ಸರ್ಕಾರದ ಎಜೆನ್ಸಿ ಹಾಗೂ ಯೋಜನೆಗಳಲ್ಲಿನ ಪಾರದರ್ಶಕತೆ ಕೊರತೆ ಕುರಿತು ಭಾರಿ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆಯಲ್ಲಿ ಜಡೆ ಜಗಳ ತಾರಕಕ್ಕೇರಿದೆ. ಎರಡು ಪಕ್ಷಗಳ ಐವರು ಜನಪ್ರತಿನಿಧಿಗಳು ನಡೆಸುತ್ತಿರುವ ಹೋರಾಟ, ಜಗಳ ವೈರಲ್ ಆಗಿದೆ.

ಉಭಯ ಪಕ್ಷದ ನಾಯಕರು ಹೋರಾಟ ನಿಲ್ಲಿಸಿಲ್ಲ. ಹೀಗಾಗಿ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿಡಿಯೋ ವೈರಲ್ ಆದ ಬಳಿಕ ಇದೀಗ ಜನಪ್ರತನಿಧಿಗಳು ಆರೋಪ ಪ್ರತ್ಯಾರೋಪ ಆರಂಭಿಸಿದ್ದಾರೆ. ನಾವು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದೇವು. ಬೋರ್ಡ್ ಬಳಿ ನಮ್ಮ ಹೋರಾಟ,ಪ್ರತಿಭಟನೆ ವ್ಯಕ್ತಪಡಿಸಿದ್ದೇವು. ಆದರೆ ಲೆಫ್ಟಿಸ್ಟ್ ಮೊರೇನಾ ಪಾರ್ಟಿ ನಾಯಕರು ಅಡ್ಡಿಪಡಿಸಿದ್ದಾರೆ. ಹೀಗಾಗಿ ಘರ್ಷಣೆಯಾಗಿದೆ ಎಂದು ನ್ಯಾಷನಲ್ ಆ್ಯಕ್ಷನ್ ಪಾರ್ಟಿ ಹೇಳಿದೆ.

error: Content is protected !!