Thursday, December 18, 2025

ಸದನದಲ್ಲಿ ಪರಪ್ಪನ ಅಗ್ರಹಾರ ಕರ್ಮಕಾಂಡದ ಬಗ್ಗೆ ಪ್ರಸ್ತಾಪ: ಆರ್‌. ಅಶೋಕ್‌ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಕಾವೇರಿದೆ. ಆಡಳಿತ ಮತ್ತು ವಿಪಕ್ಷಗಳ ನಡುವೆ ಚರ್ಚೆ ಬಿರುಸು ಪಡೆದಿದೆ. ಪ್ರತಿಪಕ್ಷ ನಾಯಕ ಆರ್​​.ಅಶೋಕ್ ಕಾನೂನು ಸುವ್ಯವಸ್ಥೆ ಮೇಲಿನ ಚರ್ಚೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನ  ಕರ್ಮಕಾಂಡದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಜೈಲಿನಲ್ಲಿ ದುಡ್ಡು ಕೊಟ್ರೆ ಏನು ಬೇಕಾದ್ರೂ ಸಿಗುತ್ತದೆ, ಪೊಲೀಸರೇ ಎದ್ದು ಹೊಲ ಮೇಯ್ದ್ರು ಅಂತಾಗಿದೆ ಎಂದು ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಈ ವೇಳೆ ಸದನದಲ್ಲಿ ಆರ್​. ಅಶೋಕ್​​ ನಟ ದರ್ಶನ್​ ವಿಚಾರವನ್ನ ಸಹ ಪ್ರಸ್ತಾಪಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಮೇಲಿನ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್​. ಅಶೋಕ್​​, ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡದ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಪೊಲೀಸರೇ ಎದ್ದು ಹೊಲ ಮೇಯ್ದ್ರು ಅಂತಾಗಿದೆ, ದುಡ್ಡು ಕೊಟ್ರೆ ಏನು ಬೇಕಾದ್ರೂ ಸಿಗುತ್ತದೆ, ಜೈಲಿನಲ್ಲಿ ಇರೋರಿಗೆ ಹೈಫೈ ಫೆಸಿಲಿಟಿ ಸಿಗುತ್ತೆ. ನಾಲ್ಕೈದು ಅಪರಾಧ ಮಾಡಿದ್ರೆ ರೆಸಾರ್ಟ್​ ಪೆಸಿಲಿಟಿ ಸಿಗುತ್ತೆ. ಅಂತರಾಷ್ಟ್ರೀಯ ಅಪರಾಧಕ್ಕೆ ಹೈಫೈ ಪೆಸಿಲಿಟಿ ಅಂತಾ ಸರ್ಕಾರದ ವಿರುದ್ಧ ಆರ್​. ಅಶೋಕ್​​ ಹರಿಹಾಯ್ದರು.

ರೌಡಿ ಶೀಟರ್ ಸೀನ ಐದಾರು ಮರ್ಡರ್ ಮಾಡಿದ್ದಾನೆ, ಅವನು ಜೈಲಲ್ಲೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಾನೆ. ಅವನಿಗೆ ಕೇಕ್ ಎಲ್ಲ ಹೇಗೆ ಒಳಗೆ ಬಂತು? ಜೈಲಿಗೆ ಏನು ಬಿಡಲ್ಲ ಅಂತ ಹೇಳುತ್ತಾರೆ, ಅಲ್ಲಿ ಹೇಗೆ ಜನ್ಮದಿನ ಆಚರಣೆ ಮಾಡಿಕೊಳ್ತಾರೆ ಅಲ್ಲಿ ಗೆಸ್ಟ್​​ಗಳು ಯಾರು? ಐದಾರು ಮರ್ಡರ್ ಮಾಡಿದವರು ಗೆಸ್ಟ್, ನಾವು‌ ಮದುವೆಗೆ ಹೇಗೆ ಗೆಸ್ಟ್ ಕರೆಯುತ್ತೇವೆ, ಅದೇ ರೀತಿ ಅಲ್ಲಿಯೂ ಕರೆಯುತ್ತಾರೆ ಅಲ್ಲಿ ಆಚರಣೆ ಮಾಡಿದ್ದು ಈ ಪೆನ್​ಡ್ರೈವ್​ನಲ್ಲಿದೆ, ನಾವು ಎಲ್ಲಿಯೂ ಸುಳ್ಳು ಹೇಳಲ್ಲ ಅದಕ್ಕೆ ಎಲ್ಲಾ ದಾಖಲೆ ಈ ಪೆನ್ ಡ್ರೈವ್ ನಲ್ಲಿದೆ ನೋಡಿ ಎಂದು ವಿಪಕ್ಷ ನಾಯಕ ಆರ್​ ಅಶೋಕ್​ ಪೆನ್​ಡ್ರೈವ್​​ ಪ್ರದರ್ಶಿಸಿದ್ದಾರೆ.

error: Content is protected !!