ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಸಿಡಿಎಫ್ ಆಗಿ ನೇಮಕಗೊಂಡಿದ್ದ ಖುಷಿಯಲ್ಲಿದ್ದ ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಭಾರೀ ಒತ್ತಡಕ್ಕೆ ಸಿಲುಕಿದ್ದಾರೆ.
ಗಾಜಾದಲ್ಲಿ ಎಲ್ಲವನ್ನೂ ಸಾಮಾನ್ಯ ಸ್ಥಿತಿಗೆ ತರಲು ಸೈನಿಕರನ್ನು ಕಳುಹಿಸಿಕೊಡುವಂತೆ, ಡೊನಾಲ್ಡ್ ಟ್ರಂಪ್, ಆಸಿಮ್ ಮುನೀರ್’ಗೆ ಒತ್ತಡವನ್ನು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.
ಒಂದು ವೇಳೆ, ಟ್ರಂಪ್ ಅವರ ಒತ್ತಡಕ್ಕೆ ಮಣಿದರೆ, ಪಾಕಿಸ್ತಾನದಲ್ಲಿ ಭಾರೀ ಪ್ರತಿಭಟನೆಯನ್ನು ಎದುರಿಸಬೇಕಾಗಿ ಬರಬಹುದು ಎಂದು ಹೇಳಲಾಗುತ್ತಿದೆ.
ಅಮೆರಿಕಾದ ಒತ್ತಡ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಮುನೀರ್, ವಾಷಿಂಗ್ಟನ್’ಗೆ ಭೇಟಿ ನೀಡುವ ಸಾಧ್ಯತೆಯಿದೆ. ಹಾಗಾದಲ್ಲಿ, ಕಳೆದ ಆರು ತಿಂಗಳಲ್ಲಿ ಮುನೀರ್, ಮೂರನೇ ಬಾರಿಗೆ ಟ್ರಂಪ್ ಅವರನ್ನು ಭೇಟಿಯಾಗಿರುವುದು ಆಗಿರುತ್ತದೆ.
ಟ್ರಂಪ್ ಅವರ ಇಪ್ಪತ್ತು ಅಂಶದ ಗಾಜಾ ಯೋಜನೆಯ ಪ್ರಕಾರ, ಮುಸ್ಲಿಂ ರಾಷ್ಟ್ರಗಳನ್ನು ಹೊಂದಿರುವ ಸೇನಾ ಪಡೆಯನ್ನು ರಚಿಸುವುದು ಟ್ರಂಪ್ ಅವರ ಲೆಕ್ಕಾಚಾರವಾಗಿದೆ. ಈ ಪಡೆಯು ಯುದ್ದದಿಂದ ನಾಶವಾಗಿರುವ ಗಾಜಾ ಪ್ರದೇಶಗಳ ಪುನರ್ ನಿರ್ಮಾಣ, ಆರ್ಥಿಕ ಚೇತರಿಕೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವುದು ಮೂಲ ಉದ್ದೇಶವಾಗಿರಲಿದೆ.
ಹಮಾಸ್ ವಿರುದ್ದ ಕಾರ್ಯಾಚರಣೆಗೆ ಸಾಕಷ್ಟು ಇಸ್ಲಾಮಿಕ್ ದೇಶಗಳು ಹಿಂದೇಟು ಹಾಕುತ್ತಿವೆ. ಯಾಕೆಂದರೆ, ಅವರ ವಿರುದ್ದ ಸಂಘರ್ಷಕ್ಕೆ ಇಳಿದಾರೆ ಪ್ರವಾದಿ ಅನುಯಾಯಿಗಳು – ಪ್ಯಾಲೆಸ್ತೇನ್ – ಇಸ್ರೇಲ್ ವಿರೋಧವನ್ನು ಕಟ್ಟಿಕೊಳ್ಳಬೇಕಾಗಿ ಬರಬಹುದು ಎನ್ನುವ ಭೀತಿ ಈ ದೇಶಗಳಿಗೆ ಕಾಡುತ್ತಿದೆ. ಈಗ, ಪಾಕಿಸ್ತಾನಕ್ಕೆಡೊನಾಲ್ಡ್ ಟ್ರಂಪ್ ಒತ್ತಡದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಪ್ರಪಂಚದ ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಮುಸ್ಲಿಂ ದೇಶವಾಗಿರುವ ಪಾಕಿಸ್ತಾನವು, ಈಗಾಗಲೇ ತನ್ನ ಎದುರಾಳಿ ಭಾರತದ ವಿರುದ್ದ ಮೂರು ಬಾರಿ ಯುದ್ದ ಮಾಡಿ ಸೋತಿದೆ. ಇದಲ್ಲದೇ, ಕಳೆದ ಬೇಸಿಗೆಯಲ್ಲಿ ಇನ್ನೊಂದು ಮಿಲಿಟರಿ ಸಂಘರ್ಷವನ್ನು ಎದುರಿಸಿದೆ. ಅಲ್ಲದೇ, ಆಂತರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಒತ್ತಡ, ಪಾಕಿಸ್ತಾನಕ್ಕೆ ಮುಳ್ಳಾಗುವ ಸಾಧ್ಯತೆಯಿದೆ.

