Saturday, December 20, 2025

VIRAL | ಸಿಟ್ಟಿನಲ್ಲಿ ಅಭಿಮಾನಿಯ ಫೋನ್‌ ಎತ್ತಿ ನೆಲಕ್ಕೆ ಎಸೆದ ಬುಮ್ರಾ! ಅಲ್ಲಿ ನಡೆದಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲಕ್ನೋದಲ್ಲಿ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯ ಕೆಟ್ಟ ಹವಾಮಾನದಿಂದ ರದ್ದಾಯಿತು. ಇದೆಲ್ಲದರ ನಡುವೆ ಟೀಂ ಇಂಡಿಯಾ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಅವರು ಕೋಪಗೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ವೈರಲ್ ವಿಡಿಯೋದಲ್ಲಿ ಜಸ್ಪ್ರೀತ್ ಬುಮ್ರಾ, ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಸಾಲಿನಲ್ಲಿ ನಿಂತಿದ್ದ ಅಭಿಮಾನಿಯೊಂದಿಗೆ ತಾಳ್ಮೆ ಕಳೆದುಕೊಂಡವರಂತೆ ವರ್ತಿಸಿದ್ದಾರೆ.

ವಾಸ್ತವವಾಗಿ ಬುಮ್ರಾ ನಿಂತಿದ್ದ ಸಾಲಿನಲ್ಲೇ ಅಭಿಮಾನಿ ಕೂಡ ನಿಂತಿದ್ದ. ಬುಮ್ರಾ ತನ್ನ ಪಕ್ಕದ ಸಾಲಿನಲ್ಲಿ ನಿಂತಿರುವುದನ್ನು ಗಮನಿಸಿದ ಅಭಿಮಾನಿ, ಬುಮ್ರಾ ಅನುಮತಿಯಿಲ್ಲದೆ ಸೆಲ್ಫಿ ವಿಡಿಯೋ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾನೆ. ಇದನ್ನು ಗಮನಿಸಿದ ಬುಮ್ರಾ ಸೆಲ್ಫಿ ವಿಡಿಯೋ ಮಾಡದಂತೆ ಅಭಿಮಾನಿ ಬಳಿ ಮನವಿ ಮಾಡಿದ್ದಾರೆ. ಆದಾಗ್ಯೂ, ಅಭಿಮಾನಿ ಬುಮ್ರಾ ಮನವಿಯನ್ನು ನಿರ್ಲಕ್ಷಿಸಿ ವಿಡಿಯೋ ಮಾಡುವುದನ್ನು ಮುಂದುವರೆಸಿದ್ದಾನೆ, ಇದರಿಂದ ಕೋಪಗೊಂಡ ಬುಮ್ರಾ, ಆ ಅಭಿಮಾನಿಯ ಫೋನ್ ಕಸಿದುಕೊಂಡು ಎಸೆದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದ್ದು, ಜನ ಪರ ವಿರೋಧ ಚರ್ಚೆಯಲ್ಲಿ ಮುಳುಗಿದ್ದಾರೆ.

error: Content is protected !!