Friday, December 19, 2025

FOOD | ಬಾಯಲ್ಲಿ ನೀರೂರಿಸುವ ಗೋಬಿ ಕರಿ ಮಾಡೋದು ಹೇಗೆ ನೋಡಿ!

ದೈನಂದಿನ ಊಟಕ್ಕೆ ಸರಳವಾಗಿಯೂ ರುಚಿಕರವಾಗಿಯೂ ಹೊಂದುವ ತರಕಾರಿಗಳಲ್ಲಿ ಗೋಬಿ ವಿಶೇಷ ಸ್ಥಾನ ಪಡೆದಿದೆ. ಹೆಚ್ಚು ಸಮಯವೂ ಬೇಕಾಗದೆ, ಕಡಿಮೆ ಪದಾರ್ಥಗಳಲ್ಲಿ ತಯಾರಾಗುವ ಈ ಗೋಬಿ ಕರಿ ಅನ್ನ, ಚಪಾತಿಗೆ ಬೆಸ್ಟ್. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಈ ರೆಸಿಪಿಯನ್ನು ನೀವು ಸುಲಭವಾಗಿ ಮಾಡಬಹುದು

ಬೇಕಾಗುವ ಪದಾರ್ಥಗಳು:

ಹೂಕೋಸು – 1 ಮಧ್ಯಮ ಗಾತ್ರದ್ದು
ಎಣ್ಣೆ – 2 ಟೇಬಲ್ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ್ದು)
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಟೊಮೇಟೊ – 2 (ಪೇಸ್ಟ್ ಮಾಡಿದ್ದು)
ಅರಿಶಿನ ಪುಡಿ – ½ ಟೀ ಸ್ಪೂನ್
ಮೆಣಸಿನಕಾಯಿ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಕೊತ್ತಂಬರಿ ಸೊಪ್ಪು – ಸ್ವಲ್ಪ

ತಯಾರಿಸುವ ವಿಧಾನ:

ಮೊದಲು ಹೂಕೋಸನ್ನು ಉಪ್ಪು ನೀರಲ್ಲಿ ಸ್ವಲ್ಪ ಹೊತ್ತು ನೆನೆಸಿ ಸ್ವಚ್ಛಗೊಳಿಸಿ. ಈಗ ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ. ಈರುಳ್ಳಿ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಈಗ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ.

ಟೊಮೇಟೊ ಪೇಸ್ಟ್ ಹಾಗೂ ಎಲ್ಲಾ ಮಸಾಲೆ ಪುಡಿಗಳನ್ನು ಹಾಕಿ ಎಣ್ಣೆ ಬೇರ್ಪಡುವವರೆಗೆ ಬೇಯಿಸಿ. ಈಗ ಹೂಕೋಸು ಸೇರಿಸಿ ಸ್ವಲ್ಪ ನೀರು ಹಾಕಿ ಮುಚ್ಚಿ ಬೇಯಿಸಿ. ಕೊನೆಯಲ್ಲಿ ಗರಂ ಮಸಾಲಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿದರೆ ರುಚಿಕರವಾದ ಗೋಬಿ ಕರಿ ಸಿದ್ಧ.

error: Content is protected !!