Sunday, December 21, 2025

ಭಾರತದ ಪ್ರಧಾನಿಗೆ ಒಲಿದ 29ನೇ ಜಾಗತಿಕ ಗೌರವ: ಮೋದಿಗೆ ಓಮನ್​ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಓಮನ್​ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರಿಗೆ ಓಮನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ಓಮನ್ ಪ್ರಶಸ್ತಿ ನೀಡಿ ಓಮನ್​ ರಾಜ ಸುಲ್ತಾನ್ ಹೈತಮ್ ಬಿನ್ ತಾರಿಕ್ ಗೌರವಿಸಿದ್ದಾರೆ.

ಇದರೊಂದಿಗೆ ಪ್ರಧಾನಿ ಮೋದಿಗೆ ಒಟ್ಟು 29 ಅಂತಾರಾಷ್ಟ್ರೀಯ ಗೌರವಗಳು ಸಿಕ್ಕಂತಾಗಿದೆ.

ಭಾರತ ಹಾಗೂ ಓಮನ್​ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ನೀಡಿದ ಕೊಡುಗೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಸುಲ್ತಾನರ ವಿಶಿಷ್ಟ ನಾಗರಿಕ ಗೌರವವಾದ ಆರ್ಡರ್ ಆಫ್ ಒಮಾನ್ ಅನ್ನು ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರು ಪ್ರದಾನ ಮಾಡಿದ್ದಾರೆ.

ಇದಕ್ಕೂ ಕೆಲವು ಗಂಟೆಗಳ ಮೊದಲು, ಇಥಿಯೋಪಿಯಾ ದೇಶವು ತನ್ನ ಅತ್ಯುನ್ನತ ನಾಗರಿಕ ಗೌರವವಾದ “ಗ್ರೇಟ್ ಆನರ್ ನಿಶಾನ್ ಆಫ್​ ಇಥಿಯೋಪಿಯಾ” ಪ್ರಶಸ್ತಿ ನೀಡಿ ಗೌರವಿಸಿತ್ತು ಎಂಬುದು ಗಮನಾರ್ಹ.

ಏನಿದು ಗ್ರೇಟ್ ಆರ್ಡರ್ ಆಫ್ ಓಮನ್?
ಗ್ರೇಟ್ ಆರ್ಡರ್ ಆಫ್ ಓಮನ್ ಎಂಬುದು ಒಮಾನ್ ದೇಶದ ಅತ್ಯುನ್ನತ ನಾಗರಿಕ ಗೌರವವಾಗಿದ್ದು, ವಿದೇಶಿ ರಾಷ್ಟ್ರಗಳ ಮುಖ್ಯಸ್ಥರು, ರಾಜಮನೆತನದ ಉನ್ನತ ಸದಸ್ಯರು ಮತ್ತು ಒಮಾನ್ ದೇಶದ ಸಂಬಂಧಗಳನ್ನು ಬಲಪಡಿಸುವ ಗಣ್ಯರಿಗೆ ಸುಲ್ತಾನ್ ನೀಡುವ ಶ್ರೇಷ್ಠ ಪ್ರಶಸ್ತಿಯಾಗಿದೆ. ಇದನ್ನು ಸುಲ್ತಾನ್ ಕಬೂಸ್ ಬಿನ್ ಸೈದ್ ಅವರು 1970ರಲ್ಲಿ ಸ್ಥಾಪಿಸಿದರು ಮತ್ತು ಇದು ಪ್ರಸ್ತುತ ಒಮಾನ್‌ನ ಅತ್ಯುನ್ನತ ಗೌರವವಾಗಿದೆ.

ಮೋದಿಗೆ 29ನೇ ಅಂತಾರಾಷ್ಟ್ರೀಯ ಗೌರವ:
ಇಥಿಯೋಪಿಯಾದ ಗ್ರೇಟ್ ಆನರ್ ನಿಶಾನ್ ಪ್ರಶಸ್ತಿಯೊಂದಿಗೆ, ಪ್ರಧಾನಿ ಮೋದಿ ಈಗ ವಿಶ್ವದ ವಿವಿಧ ರಾಷ್ಟ್ರಗಳಿಂದ 29 ಅತ್ಯುನ್ನತ ನಾಗರಿಕ ಗೌರವಗಳನ್ನು ಪಡೆದಿದ್ದಾರೆ. ಪಪುವಾ ನ್ಯೂಗಿನಿಯಾ, ಫಿಜಿ, ಪಲಾವ್, ಈಜಿಪ್ಟ್, ಫ್ರಾನ್ಸ್, ನಮೀಬಿಯಾ, ಬ್ರೆಜಿಲ್ ಸೇರಿದಂತೆ ಹಲವಾರು ದೇಶಗಳು ಕಳೆದ ಕೆಲವು ವರ್ಷಗಳಲ್ಲಿ ಅವರಿಗೆ ತಮ್ಮ ಅತ್ಯುನ್ನತ ಗೌರವಗಳನ್ನು ನೀಡಿ ಗೌರವಿಸಿದ್ದು, ಇದು ಭಾರತದ ವಿದೇಶಾಂಗ ನೀತಿಯ ಯಶಸ್ಸಿನ ಪ್ರತಿಬಿಂಬವಾಗಿಯೂ ಕಾಣುತ್ತದೆ.

error: Content is protected !!