ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಆಷಸ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಎರಡನೇ ದಿನ ನಾಯಕ ಬೆನ್ ಸ್ಟೋಕ್ಸ್ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.
ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಮಾರಕ ಬೌನ್ಸರ್ ಅನ್ನು ಸಮರ್ಥವಾಗಿ ಎದುರಿಸುವಲ್ಲಿ ಬೆನ್ ಸ್ಟೋಕ್ಸ್ ವಿಫಲರಾದರು. ಚೆಂಡನ್ನು ಹೆಲ್ಮೆಟ್‌ನ ಹಿಂಭಾಗಕ್ಕೆ ತಗುಲಿಸಿಕೊಂಡಿದ್ದಾರೆ. ಆದರೆ, ಅವರು ಬಳಸಿದ ಹೆಲ್ಮೆಟ್ ಹೆಚ್ಚಿನ ಸುರಕ್ಷತೆಯನ್ನು ಹೊಂದಿದ್ದರಿಂದ ಇಂಗ್ಲೆಂಡ್ ನಾಯಕ ಗಂಭೀರ ಗಾಯಕ್ಕೆ ತುತ್ತಾಗಿರುವುದರಿಂದ ಪಾರಾಗಿದ್ದಾರೆ. ಆದರೆ, ಈ ಘಟನೆ ದಿವಂಗತ ಫಿಲ್ ಹ್ಯೂಸ್ ಅವರ ಘಟನೆಯನ್ನು ನೆನಪಿಸುತ್ತದೆ.
ಹನ್ನೊಂದು ವರ್ಷಗಳ ಹಿಂದೆ ಅಂದರೆ 2014 ಕ್ರಿಕೆಟ್ ಇತಿಹಾಸದ ಅತ್ಯಂತ ಕರಾಳ ದಿನ ಎಂದೇ ಹೇಳಬಹುದು. ಏಕೆಂದರೆ ಆಸ್ಟ್ರೇಲಿಯಾದ 25ರ ವಯಸ್ಸಿನ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಫಿಲ್ ಹ್ಯೂಸ್ ತಲೆಗೆ ಚೆಂಡನ್ನು ತಗುಲಿಸಿಕೊಂಡು ಅಸುನೀಗಿದ್ದರು. ಶೆಫಿಲ್ಡ್ ಶೀಲ್ಡ್ ಟೂರ್ನಿಯ ಪಂದ್ಯದ ವೇಳೆ ಶೇನ್ ಎಬಾಟ್ ಅವರ ಮಾರಕ ಬೌನ್ಸರ್ ಅವರನ್ನು ಎದುರಿಸುವಾಗ ಚೆಂಡು ಫಿಲ್ ಹ್ಯೂಸ್ ಅವರ ಹೆಲ್ಮೆಟ್ ಹಿಂಭಾಗ ತಗುಲಿ ತೀವ್ರವಾಗಿ ಗಾಯಗೊಂಡಿದ್ದರು ಹಾಗೂ ಮೈದಾನದಲ್ಲಿ ಪ್ರಜ್ಞೆ ಕಳೆದುಕೊಂಡು ನೆಲಕ್ಕೆ ಕುಸಿದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಅವರು ಮೃತಪಟ್ಟಿದ್ದರು.

