ಸಾದಾ ತರಕಾರಿ ಕರಿಯಿಂದ ಹಿಡಿದು ವಿಶೇಷ ಭೋಜನವರೆಗೂ, ಶುಂಠಿ ಮತ್ತು ಬೆಳ್ಳುಳ್ಳಿಗಳಿಲ್ಲದೇ ಭಾರತೀಯ ಅಡುಗೆ ಅಪೂರ್ಣವೆನಿಸುತ್ತದೆ. ದಿನನಿತ್ಯದ ಅಡುಗೆಯನ್ನು ಸುಲಭಗೊಳಿಸಲು ಹಲವರು ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಅನ್ನು ಮನೆಯಲ್ಲೇ ತಯಾರಿಸಿ ಸಂಗ್ರಹಿಸುವುದನ್ನು ಇಷ್ಟಪಡುತ್ತಾರೆ. ಕಲಬೆರಕೆ ಇಲ್ಲದ, ತಾಜಾ ಪೇಸ್ಟ್ ಮನೆಯಲ್ಲೇ ಮಾಡಿಕೊಳ್ಳುವುದು ತುಂಬಾ ಸರಳವಾಗಿದೆ.
ಪೇಸ್ಟ್ ತಯಾರಿಸುವಾಗ ಗಮನಿಸಬೇಕಾದ ಅಂಶಗಳು:
- ಶುಂಠಿಯ ಸಿಪ್ಪೆಯನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು, ಇಲ್ಲದಿದ್ದರೆ ಪೇಸ್ಟ್ ಬೇಗ ಹಾಳಾಗುತ್ತದೆ ಮತ್ತು ಕಹಿ ರುಚಿ ಬರುತ್ತದೆ
- ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಸಮ ಪ್ರಮಾಣದಲ್ಲಿ ಬಳಸುವುದು ಉತ್ತಮ
- ಮಿಕ್ಸಿಗೆ ಹಾಕುವಾಗ ಒಂದು ಚಮಚ ಎಣ್ಣೆ ಸೇರಿಸಿದರೆ ಪೇಸ್ಟ್ ಮೆತ್ತಗೆ ಬರುತ್ತದೆ
ರುಚಿ ಮತ್ತು ಶೇಖರಣೆಗೆ ಸಣ್ಣ ಟಿಪ್ಸ್:
- ಒಂದು ಚಮಚ ವಿನೆಗರ್ ಹಾಗೂ ಅರ್ಧ ಚಮಚ ಉಪ್ಪು ಸೇರಿಸಿದರೆ ಪೇಸ್ಟ್ ಹೆಚ್ಚು ದಿನ ತಾಜಾ ಇರುತ್ತದೆ
- ತಯಾರಿಸಿದ ಪೇಸ್ಟ್ ಅನ್ನು ಸ್ವಚ್ಛ, ಗಾಳಿಯಾಡದ ಪಾತ್ರೆಯಲ್ಲಿ ತುಂಬಿಸಿ
- ರೆಫ್ರಿಜರೇಟರ್‌ನಲ್ಲಿ ಇಟ್ಟರೆ ವಾರಗಳ ಕಾಲ ಹಾಳಾಗದೇ ಬಳಸಬಹುದು.

