ಸ್ಟ್ರೀಟ್ ಫುಡ್ ಅಂದಾಗ ಮೊದಲು ನೆನಪಿಗೆ ಬರೋದು ದಹಿ ಪುರಿ. ಒಂದೇ ತುತ್ತಿನಲ್ಲಿ ಸಿಹಿ, ಖಾರ, ಹುಳಿ ರುಚಿಗಳ ಅನುಭವ ನೀಡುವ ಈ ಸ್ನ್ಯಾಕ್ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರ ಫೇವರಿಟ್. ನೀವೂ ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು
ಪುರಿ – 12–15
ಗಟ್ಟಿ ಮೊಸರು – 1 ಕಪ್
ಬೇಯಿಸಿದ ಆಲೂಗಡ್ಡೆ – 2
ಬೇಯಿಸಿದ ಕಡಲೆಕಾಳು – ½ ಕಪ್
ಹಸಿರು ಚಟ್ನಿ – 3 ಟೇಬಲ್ ಸ್ಪೂನ್
ಸಿಹಿ ಹುಣಸೆ ಚಟ್ನಿ – 3 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೆಂಪು ಮೆಣಸಿನ ಪುಡಿ – ಸ್ವಲ್ಪ
ಚಾಟ್ ಮಸಾಲ – ½ ಟೀ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಸೇವ್ – ಸ್ವಲ್ಪ
ಮಾಡುವ ವಿಧಾನ
ಮೊದಲು ಪುರಿಗಳ ಮೇಲ್ಭಾಗವನ್ನು ತೂತು ಅದರೊಳಗೆ ಆಲೂಗಡ್ಡೆ–ಕಡಲೆ ಮಿಶ್ರಣವನ್ನು ತುಂಬಿ. ನಂತರ ಪ್ರತಿ ಪುರಿಗೂ ಮೊಸರು ಹಾಕಿ. ಅದರ ಮೇಲೆ ಹಸಿರು ಚಟ್ನಿ ಮತ್ತು ಸಿಹಿ ಹುಣಸೆ ಚಟ್ನಿ ಹಾಕಿ. ಉಪ್ಪು, ಚಾಟ್ ಮಸಾಲ ಮತ್ತು ಮೆಣಸಿನ ಪುಡಿ ಹರಡಿ. ಕೊತ್ತಂಬರಿ ಸೊಪ್ಪು ಹಾಗೂ ಸೇವ್ ಹಾಕಿ ತಕ್ಷಣವೇ ಸರ್ವ್ ಮಾಡಿ.

