ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ರಸ್ತೆ ನಿಯಮಗಳು ಪದೆ ಪದೇ ಉಲ್ಲಂಘನೆ ಆಗುತ್ತಲೇ ಇರುತ್ತದೆ. ವೇಗವಾಗಿ ವಾಹನ ಚಾಲಾ ಯಿಸುವುದು, ಓವರ್ ಟೇಕ್ ಮಾಡುವುದು, ಹೆಲ್ಮೆಟ್ ಧರಿಸದಿರುವುದು, ಒಂದೆ ಬೈಕ್ ನಲ್ಲಿ ತ್ರಿಬಲ್ ರೈಡ್ ಹೋಗುವುದು ಇಂತಹ ಅನೇಕ ಘಟನೆಗಳು ದಿನನಿತ್ಯ ನಡೆ ಯುತ್ತಲೇ ಇರುತ್ತದೆ. ಜನರಿಗೆ ಪ್ರಾಣಾಪಾಯ ಆಗಬಾರದು, ಅವರ ಜೀವಕ್ಕೆ ರಕ್ಷಣೆ ಒದಗಿಸಬೇಕು ಎಂಬ ಕಾರಣಕ್ಕೆ ಟ್ರಾಫಿಕ್ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಉಲ್ಲಂಘಿಸುವವರಿಗೆ ದಂಡ, ಜೈಲು ಶಿಕ್ಷೆ ಇತರ ನಿಯಮ ಕೂಡ ಇದೆ. ಹಾಗಿದ್ದರೂ ಜನರಿಗೆ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಇದೆ.
ಟ್ರಾಫಿಕ್ ನಿಯಮದಲ್ಲಿ ದ್ವಿ ಚಕ್ರ ವಾಹನದಲ್ಲಿ ಇಬ್ಬರು ಮಾತ್ರ ಕೂರಬೇಕು ಎಂಬ ನಿಯಮ ಇದೆ. ಆದರೆ ಒಂದೇ ಬೈಕ್ ನಲ್ಲಿ ಬರೋಬ್ಬರಿ 7 ಜನ ಯುವಕರು ಸವಾರಿ ಮಾಡುತ್ತಿದ್ದ ಘಟನೆ ಮುಂಬೈನಲ್ಲಿ ನಡೆದಿದೆ. ಸದ್ಯ ಈ ಕುರಿತಾದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ಆಗಿದೆ.
ಮುಂಬೈನ ಸಾಕಿ ನಾಕಾದಲ್ಲಿ ಸಂಚಾರ ದಟ್ಟಣೆಯ ನಡುವೆ ಏಳು ಯುವಕರು ಒಂದೆ ಬೈಕ್ ನಲ್ಲಿ ಕೂತು ಅಪಾಯಕಾರಿಯಾಗಿ ಸವಾರಿ ಮಾಡಿದ್ದಾರೆ. ಅಪ್ರಾಪ್ತ ವಯಸ್ಕರು ಸಂಚಾರ ನಿಯಮ ಗಳನ್ನು ಉಲ್ಲಂಘಿಸಿದ್ದು ವೈರಲ್ ಆದ ವಿಡಿಯೋದಲ್ಲಿ ಕಾಣಬಹುದು. ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ನೆಟ್ಟಿಗರು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ಆಗ್ರಹಿಸಿದ್ದಾರೆ.

