ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನ ರವೀಂದ್ರನಾಥ ಟಾಗೋರ್ ಅವರನ್ನು “ಅವಮಾನಿಸುವ” ಮೂಲಕ ಆರಂಭಿಸಿ, ಮಹಾತ್ಮ ಗಾಂಧಿಯವರಿಗೆ ಅವಮಾನ ಮಾಡುವ ಮೂಲಕ ಅಂತ್ಯಗೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದನ್ನು ಮಾಲಿನ್ಯ ಹೆಚ್ಚಾಗಿದ್ದ’ ಅಧಿವೇಶನ ಎಂದು ಕರೆದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ತಮ್ಮ ಪಕ್ಷ ವಾಯುಮಾಲಿನ್ಯದ ಬಗ್ಗೆ ಚರ್ಚೆಗೆ ಸಿದ್ಧವಾಗಿತ್ತು. ಆದರೆ ಸರ್ಕಾರ ಅಂತಹ ಚರ್ಚೆಯಿಂದ ಓಡಿಹೋಗಿದೆ ಎಂದು ಆರೋಪಿಸಿದ್ದಾರೆ.
ಮಣಿಪುರಕ್ಕೆ ಸಂಬಂಧಿಸಿದಂತೆ ಎರಡು ಮತ್ತು ಅನುದಾನಕ್ಕೆ ಪೂರಕ ಬೇಡಿಕೆಯೊಂದಿಗೆ 14 ಮಸೂದೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನಮಗೆ ತಿಳಿಸಲಾಗಿತ್ತು. 12 ಮಸೂದೆಗಳಲ್ಲಿ ಐದು ಮಸೂದೆಗಳನ್ನು ಮಂಡಿಸಲಾಗಿಲ್ಲ. ಈ ಮಸೂದೆಗಳನ್ನು ಮಂಡಿಸಲಾಗದಿದ್ದರೂ ಯಾಕೆ ನಮಗೆ ಮಾಹಿತಿ ನೀಡಿದರು ಎಂಬುದು ಅರ್ಥವಾಗುತ್ತಿಲ್ಲ ಎಂದು ರಮೇಶ್ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಸಾಮಾನ್ಯವಾಗಿ ಅಧಿವೇಶನದ ಕೊನೆಯಲ್ಲಿ ಬ್ರಹ್ಮೋಸ್ ಕ್ಷಿಪಣಿ ಜೊತೆಗೆ ಅವರು ಬರ್ತಾರೆ ಅಂತಾ ಸರ್ವ ಪಕ್ಷ ಸಭೆಯಲ್ಲಿ ರಾಜನಾಥ್ ಸಿಂಗ್ ಗೆ ಹೇಳಿದ್ದೆ. ಅವರು ನಕ್ಕಿದ್ದರು. ಈ ಬಾರಿಯೂ ಅದು ಆಯಿತು. ಕೊನೆಯಲ್ಲಿ VB-G RAM G ಮಸೂದೆಯನ್ನು ವಿರೋಧದ ನಡುವೆ ಅಂಗೀಕರಿಸಲಾಯಿತು. ವಂದೇ ಮಾತರಂ ಚರ್ಚೆ ವೇಳೆ ನೆಹರೂ ಅವರಿಗೆ ಅವಮಾನ, ಇತಿಹಾಸವನ್ನು ತಿರುಚುವುದು ಮತ್ತು ಟಾಗೋರ್ ಅವರನ್ನು ಅವಮಾನಿಸಲಾಯಿತು ಎಂದು ಹೇಳಿದರು.
ಮನೇಗ್ರಾವನ್ನು VB-G RAM G ಎಂದು ಹೆಸರು ಬದಲಾವಣೆಯನ್ನು ಉಲ್ಲೇಖಿಸಿದ ಜೈರಾಮ್ ರಮೇಶ್, ಗಾಂಧಿಯ ಅವಮಾನದೊಂದಿಗೆ ಅಧಿವೇಶನ ಕೊನೆಗೊಂಡಿತು. ಆಧುನಿಕ ಭಾರತವನ್ನು ನಿರ್ಮಿಸಿದ ಮೂವರನ್ನು ಅವಮಾನಿಸುವ ಪ್ರಧಾನಿ ಮೋದಿಯವರ ತಂತ್ರ ಸ್ಪಷ್ಟವಾಗಿದೆ ಎಂದು ರಮೇಶ್ ಹೇಳಿದರು.
.

