ಹೊಸದಿಗಂತ ಡಿಜಿಟಲ್ ಡೆಸ್ಕ್:
ತೈವಾನ್‌ನ ಕೇಂದ್ರ ತೈಪಿ ರೈಲು ನಿಲ್ದಾಣದ ಸಬ್ ವೇ ಬಳಿ ದುರ್ಷರ್ಮಿಗಳು ಸ್ಮೋಕ್ ಬಾಂಬ್ ಎಸೆದಿದ್ದು, ದಟ್ಟ ಹೊಗೆ ಆವರಿಸಿಕೊಳ್ಳುತ್ತಿದ್ದಂತೆ ದುರ್ಷ್ಕರ್ಮಿ ಏಕಾಏಕಿ ಚಾಕು ಹಿಡಿದು ದಾಳಿ ನಡೆಸಿದ್ದಾರೆ.
ಘಟನೆಯಲ್ಲಿ ಮೂವರು ಗಂಭೀರ ಗಾಯದಿಂದ ಮೃತಪಟ್ಟಿದ್ದಾರೆ. ಇನ್ನು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ವೇಳೆ ಸ್ಮೋಕ್ ಬಾಂಬ್ ಹೊಗೆಯಿಂದ ಹಲವರು ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ.
ಸೆಂಟ್ರಲ್ ಥೈಪಿ ರೈಲು ನಿಲ್ದಾಣದ ಬಳಿಕ ನಡೆದ ಭೀಕರ ಘಟನೆ ದೃಶ್ಯಗಳು ಸೆರೆಯಾಗಿದೆ. ರೈಲು ನಿಲ್ದಾಣದ ಪಕ್ಕದ ರಸ್ತೆ ಬಳಿ ಆಗಮಿಸಿದ ದುಷ್ಕರ್ಮಿ ಭಾರಿ ತಯಾರಿಯೊಂದಿಗೆ ಸಜ್ಜಾಗಿದ್ದಾನೆ. ಕಪ್ಪು ಡ್ರೆಸ್ ಧರಿಸಿದ್ದ ಈತ ಬ್ಯಾಗ್‌ನಲ್ಲಿ ತಂದಿದ್ದ ಸ್ಮೋಕ್ ಬಾಂಬ್ ರಸ್ತೆ, ಸಬ್ ವೇ ಬಳಿ ಎಸೆದಿದ್ದಾನೆ. ಬಳಿಕ ಬ್ಯಾಗ್‌ನಿಂದ ಹರಿತವಾದ ಚಾಕು ತೆಗೆದಿದ್ದಾನೆ. ಈ ವೇಳೆ ಸ್ಮೋಕ್ ಬಾಂಬ್‌ನಿಂದ ದಟ್ಟ ಹೊಗೆ ಆವರಿಸಿದೆ. ಇದೇ ಸಂದರ್ಭದಲ್ಲಿ ದುಷ್ಕರ್ಮಿ ಚಾಕು ಮೂಲಕ ದಾಳಿ ನಡೆಸಿದ್ದಾರೆ. ಎದುರಿಗೆ ಸಿಕ್ಕ ಸಿಕ್ಕರವರ ಮೇಲೆ ದಾಳಿ ಮಾಡಿದ್ದಾರೆ. ದಾಳಿ ಆರಂಭಗೊಳ್ಳುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ ಹಿಂಬಾಸಿ ಹಲವರ ಮೇಲೆ ದಾಳಿ ಮಾಡಿದ್ದಾನೆ. ಈತನ ದಾಳಿ ದೃಶ್ಯಗಳು ಸೆರೆಯಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳುವಷ್ಟರಲ್ಲಿ ಮೂವರು ಮೃತಪಟ್ಟಿದ್ದರು. ಐವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಐವರು ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಇತ್ತ ಸ್ಮೋಕ್ ಬಾಂಬ್ ಕಾರಣ ಹಲವರು ಉಸಿರಾಟ ಸಮಸ್ಯೆಯಿಂದ ಬಳಲಿದ್ದಾರೆ. ಆರೋಗ್ಯ ಸಮಸ್ಯೆ ಎದುರಿಸಿದ ಹಲವರನ್ನು ಆಸ್ಪತ್ರೆ ದಾಖಲಿಸಿದ್ದಾರೆ.
ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಈತ ಕಟ್ಟಡದ ಮೇಲಿಂದ ಹಾರಿದ್ದಾನೆ. ಗಂಭೀರವಾಗಿ ಗಾಯಗೊಂಡ ಈ ದುಷ್ಕರ್ಮಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ ದುಷ್ಕರ್ಮಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

