January20, 2026
Tuesday, January 20, 2026
spot_img

ಒಂದೆಡೆ ರಷ್ಯಾದ ತೈಲ ಖರೀದಿಗೆ ವಿರೋಧ, ಇನ್ನೊಂದೆಡೆ ಪುಟಿನ್ ಭೇಟಿಯಾಗಲು ಮುಂದಾದ ಟ್ರಂಪ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್ ನಲ್ಲಿ ಶಾಂತಿ ಸ್ಥಾಪನೆಗಾಗಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಲಿದ್ದಾರೆ. ಆಗಸ್ಟ್ ಹದಿನೈದಕ್ಕೆ ಈ ಇಬ್ಬರು ಜಾಗತಿಕ ನಾಯಕರ ಭೇಟಿ ಅಲಾಸ್ಕದಲ್ಲಿ ನಿಗದಿಯಾಗಿದೆ.

ಇತ್ತ ಇದೇ, ಅಮೆರಿಕವು ಕೆಲವು ದಿನಗಳ ಹಿಂದೆ, ರಷ್ಯಾ ಜೊತೆಗಿನ ವಾಣಿಜ್ಯ ಸಂಬಂಧಕ್ಕಾಗಿ ಭಾರತಕ್ಕೆ ಹೆಚ್ಚುವರಿ ಸುಂಕವನ್ನು ಜಡಾಯಿಸಿದ್ದರು. ರಷ್ಯಾ ಮತ್ತು ಭಾರತದ ಆರ್ಥಿಕತೆ ಹಳಿ ತಪ್ಪಿ ಹೋಗಿದೆ ಎನ್ನುವ ದುರಂಹಕಾರದ ಹೇಳಿಕೆಯನ್ನೂ ಟ್ರಂಪ್ ನೀಡಿದ್ದರು. ಈಗ, ಅದೇ ರಷ್ಯಾ ಜೊತೆಗೆ ಮಾತುಕತೆಗೆ ಮುಂದಾಗಿದ್ದಾರೆ.


ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೇರಿದಂತೆ ಹಲವು ದೇಶಗಳ ನಾಯಕರ ಜೊತೆಗಿನ ಮಾತುಕತೆಯ ನಂತರ, ಟ್ರಂಪ್ ಅವರು ಪುಟಿನ್ ಅವರನ್ನು ಭೇಟಿಯಾಗುತ್ತಿರುವ ವಿಚಾರವನ್ನು ಸಾಮಾಜಿಕ ಮಾಧ್ಯಮದ ಮೂಲಕ ಪ್ರಕಟಿಸಿದ್ದಾರೆ. ಎರಡು ದೇಶಗಳ ನಡುವಿನ ಸಂಘರ್ಷ ಕೊನೆಗಾಣಿಸಲು ಈ ಮಾತುಕತೆ ಫಲಪ್ರದವಾಗಬಹುದು ಎಂದು ಟ್ರಂಪ್ ಅಭಿಪ್ರಾಯ ಪಟ್ಟಿದ್ದಾರೆ.

ಉಕ್ರೇನ್ ದೇಶದ ಹಲವು ಪ್ರದೇಶಗಳನ್ನು ರಷ್ಯಾ ಈಗಾಗಲೇ ವಶ ಪಡಿಸಿಕೊಂಡಿದೆ. ಯುದ್ದವನ್ನು ನಿಲ್ಲಿಸಲು ಅಮೆರಿಕ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಕೆಲವು ಪ್ರದೇಶಗಳನ್ನು ಎರಡು ದೇಶ ವಿನಿಮಯ ಮಾಡಿಕೊಳ್ಳುವ ಮೂಲಕ, ಉಭಯ ದೇಶಗಳಿಗೂ ಅನುಕೂಲವಾಗುವ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನ ನಡೆಯಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Must Read