Sunday, December 21, 2025

ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ತೀರ್ಮಾನ ಅಂತಿಮ: ಸಚಿವ ಎಂ.ಬಿ. ಪಾಟೀಲ್

ಹೊಸ ದಿಗಂತ ವರದಿ, ವಿಜಯಪುರ:

ಸಿಎಂ ಸ್ಥಾನ ಅಧಿಕಾರ ಹಂಚಿಕೆ ಕುರಿತು ನಾನೇನೂ ಮಾತನಾಡೋಕೆ ಹೋಗಲ್ಲ. ಏನಿದ್ದರೂ ನಮ್ಮಲ್ಲಿ ಹೈಕಮಾಂಡ್ ಅಂತಿಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಎರಡೂವರೆ ವರ್ಷ ಸಿಎಂ ಎಂದು ಹೇಳಿಲ್ಲ, ಹೈಕಮಾಂಡ್ ಹೇಳುವರೆಗೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಬ್ಬರು ತಮ್ಮ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಯಾರೇ ಏನೇ ಹೇಳಿದರೂ ಹೈಕಮಾಂಡ್ ಸುಪ್ರೀಂ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತೆ ಅದು ಸಿಎಂ, ಡಿಸಿಎಂ, ಎಂ.ಬಿ. ಪಾಟೀಲ ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ. ಹೈಕಮಾಂಡ್ ಫೈನಲ್, ನೋ ಕಾಮೆಂಟ್ಸ್. ಸಿಎಂ ಪವರ್ ಶೇರಿಂಗ್ ಬಗ್ಗೆ ನೋ ಕಾಮೆಂಟ್ಸ್ ಅದನ್ನು ಬಿಟ್ಟು ಬಿಡಿ ಎಂದರು.

ಬೆಳಗಾವಿಯ ಅಧಿವೇಶನ ಡಿನ್ನರ್ ಅಧಿವೇಶನ ಆಯ್ತು ಎಂದ ಬಿಜೆಪಿಗರ ಆರೋಪಕ್ಕೆ, ಪಾಪ ಬೆಂಗಳೂರಿನಿಂದ ಬಂದಿರ್ತಾರೆ. ಊಟ ಮಾಡದೇ ಉಪವಾಸ ಇರಬೇಕಾ ?, ಬಿಜೆಪಿಯವರ ತಮ್ಮ ತಮ್ಮವರು ಊಟ ಮಾಡಿರುತ್ತಾರೆ. ಅದರಲ್ಲಿ ತಪ್ಪೇನಿದೆ. ಅವರವರ ಸಮಾಜದವರು, ದಲಿತ ಸಮಾಜದವರು ಸೇರಿದ್ದಾರೆ. ಲಿಂಗಾಯತ ಶಾಸಕರು ಸೇರಿಲ್ಲ ನಾವು ಶೀಘ್ರವೇ ಸೇರುತ್ತೇವೆ ಎಂದರು.

ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ ಎಂದ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ವಿಜಯೇಂದ್ರ ಇಸ್ ಔಟ್ ಗೋಯಿಂಗ್ ಬಿಜೆಪಿ ಸ್ಟೇಟ್ ಪ್ರೆಸಿಡೆಂಟ್. ಎನಿ ಟೈಮ್ ಎನಿ ಮೂವ್ಮೆಂಟ್ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹೋಗುತ್ತೆ. ವಿಜಯೇಂದ್ರ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲು ಹೇಳಿ. ತಮ್ಮ ಕುರ್ಚಿ ಅಲ್ಲಾಡುತ್ತಿದೆ, ನಮ್ಮ ಕುರ್ಚಿ ಬಗ್ಗೆ ಚಿಂತೆ ಯಾಕೆ. ನಿಮ್ಮ ಚಿಂತಿ ಮಾಡಿ ನಿಮ್ಮ ಕುರ್ಚಿ ಉಳಿಸಿಕೊಳ್ಳಿ ಎಂದರು.

error: Content is protected !!