♈ ಮೇಷ:
ಇವತ್ತು ಎಲ್ಲವನ್ನೂ ನಾನೇ ಮಾಡುವೆ ಎನ್ನುವ ಬದಲು ತಂಡದೊಂದಿಗೆ ಕೆಲಸ ಮಾಡಿ. ಹೂಡಿಕೆಗಳು ನಿಮಗೆ ಲಾಭ ತರಲಿವೆ. ಮನೆಯಲ್ಲಿ ಶಾಂತಿ ಇರಲಿದೆ.
♉ ವೃಷಭ:
ಉದ್ಯೋಗ ಮತ್ತು ಖಾಸಗಿ ವ್ಯವಹಾರಗಳಲ್ಲಿ ಅಭಿವೃದ್ಧಿ ಕಂಡುಬರಲಿದೆ. ಸಂಗಾತಿಯೊಂದಿಗೆ ಸುಂದರ ಬಾಂಧವ್ಯ ಇರಲಿದ್ದು, ಆರ್ಥಿಕವಾಗಿ ಆದಾಯ ಹೆಚ್ಚಲಿದೆ.
♊ ಮಿಥುನ:
ನಿಮ್ಮ ಕೆಲಸದ ವೈಖರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಆದರೆ ಕೇವಲ ಕೆಲಸಕ್ಕೆ ಅಂಟಿಕೊಳ್ಳದೆ ಕುಟುಂಬಕ್ಕೂ ಸಮಯ ನೀಡಿ, ಅವರನ್ನು ಅಸಮಾಧಾನಗೊಳಿಸಬೇಡಿ.
♋ ಕಟಕ:
ಸಣ್ಣ ತಪ್ಪುಗಳೂ ಇಂದು ದೊಡ್ಡ ಚಿಂತೆಗೆ ಕಾರಣವಾಗಬಹುದು. ಸಂಗಾತಿಯೊಂದಿಗೆ ಕಠಿಣವಾಗಿ ವರ್ತಿಸಬೇಡಿ, ಇದು ಮನೆಯ ಸೌಹಾರ್ದತೆಯನ್ನು ಕೆಡಿಸಬಹುದು.
♌ ಸಿಂಹ:
ನಿಮ್ಮ ಗುರಿ ತಲುಪಲು ಜಡತ್ವ ಬಿಟ್ಟು ಕಠಿಣ ಶ್ರಮ ಪಡಬೇಕಿದೆ. ಕೌಟುಂಬಿಕವಾಗಿ ಇದ್ದ ಅಶಾಂತಿ ದೂರವಾಗಿ ನೆಮ್ಮದಿ ಮರಳಲಿದೆ.
♍ ಕನ್ಯಾ:
ಇವತ್ತು ಮಾನಸಿಕ ಒತ್ತಡ ಮತ್ತು ಉದಾಸೀನತೆ ನಿಮ್ಮನ್ನು ಕಾಡಬಹುದು. ಕೆಲಸ ಮಾಡುವ ಶೈಲಿಯನ್ನು ಬದಲಿಸಿಕೊಳ್ಳುವುದು ಅನಿವಾರ್ಯ. ಕುಟುಂಬದ ಬೆಂಬಲ ಸ್ವಲ್ಪ ಕಡಿಮೆ ಇರಲಿದೆ.
♎ ತುಲಾ:
ವೃತ್ತಿ ಜೀವನದಲ್ಲಿ ಅಡೆತಡೆಗಳು ಎದುರಾಗಬಹುದು. ಕೆಲಸದಲ್ಲಿ ತಪ್ಪುಗಳಾಗದಂತೆ ಗಮನವಿರಲಿ. ಯಾರೊಂದಿಗೂ ವಾದಕ್ಕೆ ಇಳಿಯಬೇಡಿ, ಸಂಬಂಧ ಉಳಿಸಿಕೊಳ್ಳಿ.
♏ ವೃಶ್ಚಿಕ:
ಇಂದು ಎಲ್ಲವೂ ಸುಗಮವಾಗಿ ನಡೆಯಲಿದೆ. ಪ್ರೀತಿಯ ವಿಷಯದಲ್ಲಿ ಶುಭ ಸುದ್ದಿ ಕೇಳುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳಲಿದ್ದು, ವಿರೋಧಿಗಳ ಕಾಟ ತಗ್ಗಲಿದೆ.
🏹 ಧನು:
ಹಠ ಹಿಡಿದು ಕೆಲಸ ಮುಗಿಸುವ ಅಭ್ಯಾಸ ಮಾಡಿಕೊಳ್ಳಿ. ಆಪ್ತ ಜನರೊಂದಿಗೆ ಮುನಿಸು ಉಂಟಾಗದಂತೆ ಎಚ್ಚರವಿರಲಿ. ಆರ್ಥಿಕವಾಗಿ ಸ್ವಲ್ಪ ಹಿನ್ನಡೆ ಕಾಣಬಹುದು.
♑ ಮಕರ:
ವೃತ್ತಿಯಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಲಿದೆ. ನೀವು ಬಹುಕಾಲದಿಂದ ಬಯಸಿದ್ದ ವಸ್ತು ಅಥವಾ ಫಲಿತಾಂಶ ಸಿಗುವ ಕಾಲ ಬಂದಿದೆ. ಸ್ನೇಹಿತರಿಂದ ಉತ್ತಮ ಸಹಕಾರ ದೊರೆಯಲಿದೆ.
♒ ಕುಂಭ:
ಕೆಲಸದ ಒತ್ತಡ ಇಂದು ನಿಮ್ಮನ್ನು ಹೈರಾಣಾಗಿಸಬಹುದು. ಆತ್ಮೀಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು. ಅಸಹನೆ ತೋರದೆ ಶಾಂತವಾಗಿರಿ.
♓ ಮೀನ:
ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮುಗಿಸುವ ಒತ್ತಡ ಇರಲಿದೆ. ಕೈಯಿಂದ ಹಣ ಸ್ವಲ್ಪ ಹೆಚ್ಚೇ ಖರ್ಚಾಗಬಹುದು. ಆದರೆ ಮನೆಯಲ್ಲಿ ಮಾತ್ರ ನೆಮ್ಮದಿಯ ವಾತಾವರಣ ಇರಲಿದೆ.

