ಸಂಜೆಯ ಹೊತ್ತಿಗೆ ಚಹಾ ಕೈಯಲ್ಲಿ ಹಿಡಿದು, ಬಿಸಿ ಬಿಸಿ ತಿಂಡಿ ಬೇಕು ಅನ್ನಿಸುವ ಕ್ಷಣಕ್ಕೆ ಮನಸ್ಸಿಗೆ ಮೊದಲು ನೆನಪಾಗುವುದೇ ವಡೆ. ಅದರಲ್ಲಿ ಸಬ್ಬಕ್ಕಿ ವಡೆಗೆ ವಿಶೇಷ ಸ್ಥಾನ ಇದೆ. ಅಕ್ಕಿ ಹಿಟ್ಟು ಇಲ್ಲದೇ, ಸಬ್ಬಕ್ಕಿಯಿಂದ ತಯಾರಾಗುತ್ತೆ ಈ ವಡೆ. ಹೊಟ್ಟೆ ತುಂಬಿಸುವುದಕ್ಕಿಂತಲೂ ಮನಸ್ಸಿಗೆ ತೃಪ್ತಿ ಕೊಡುವ ಈ ಸ್ನ್ಯಾಕ್ ಎಲ್ಲರಿಗೂ ಇಷ್ಟ. ನೀವೂ ಒಮ್ಮೆ ಮಾಡಿ
ಬೇಕಾಗುವ ಪದಾರ್ಥಗಳು:
ಸಬ್ಬಕ್ಕಿ – 1 ಕಪ್ (2–3 ಗಂಟೆ ನೆನೆಸಿದ್ದು)
ಉದ್ದಿನ ಬೇಳೆ – 2 ಟೇಬಲ್ ಸ್ಪೂನ್
ಸಣ್ಣ ಈರುಳ್ಳಿ – 1 (ಸಣ್ಣವಾಗಿ ಕತ್ತರಿಸಿದ)
ಹಸಿಮೆಣಸು – 2
ಶುಂಠಿ – 1 ಟೀ ಸ್ಪೂನ್ (ಕತ್ತರಿಸಿದ)
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಜೀರಿಗೆ – 1 ಟೀ ಸ್ಪೂನ್
ಉಪ್ಪು – ರುಚಿಗೆ
ಎಣ್ಣೆ – ಕರಿಯಲು
ತಯಾರಿಸುವ ವಿಧಾನ:
ನೆನೆಸಿದ ಸಬ್ಬಕ್ಕಿಯನ್ನು ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ಉದ್ದಿನ ಬೇಳೆ ಪೇಸ್ಟ್, ಈರುಳ್ಳಿ, ಹಸಿಮೆಣಸು, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ಜೀರಿಗೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಮಿಶ್ರಣ ಸ್ವಲ್ಪ ಗಟ್ಟಿಯಾಗಿರಲಿ.
ಕೈಗೆ ಸ್ವಲ್ಪ ನೀರು ಹಾಕಿ ವಡೆ ಆಕಾರಕ್ಕೆ ಮಾಡಿ ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ಬಿಸಿ ಬಿಸಿ ಸಬ್ಬಕ್ಕಿ ವಡೆಗಳನ್ನು ಚಟ್ನಿ ಅಥವಾ ಸಾಸ್ ಜೊತೆಗೆ ಸವಿಯಿರಿ.

