Monday, December 22, 2025

ಶಾಲೆಯಲ್ಲಿ ಭಕ್ತಿ ಗೀತೆ ಹಾಡಿದ್ದಕ್ಕೆ ಗಾಯಕಿ ಮೇಲೆ ಹಲ್ಲೆಗೆ ಯತ್ನ: ಸಹ-ಮಾಲೀಕ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಂಗಾಳಿ ಸಿನಿಮಾವೊಂದರ ಭಕ್ತಿ ಗೀತೆಯನ್ನು ಹಾಡಿದ್ದಕ್ಕೆ ಗಾಯಕಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದ ಪೂರ್ಬ ಮೇದಿನಿಪುರ್​ನ ಭಾಗಬನ್​ಪುರ್ ಎಂಬಲ್ಲಿನ ಶಾಲೆಯೊಂದರಲ್ಲಿ ಬಂಗಾಳಿ ಗಾಯಕಿ ಲಗ್ನಜಿತಾ ಚಕ್ರಬರ್ತಿ ಎಂಬಾಕೆಯನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದದ್ದು, ಈ ಸಂಬಂಧ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಾಗಿರುವ ವ್ಯಕ್ತಿಯು ಆ ಶಾಲೆಯ ಒಬ್ಬ ಸಹ-ಮಾಲೀಕ ಎನ್ನಲಾಗಿದೆ.

ಭಾಗಬನ್​ಪುರ್​ನಲ್ಲಿರುವ ಸೌತ್ ಪಾಯಿಂಟ್ ಪಬ್ಲಿಕ್ ಸ್ಕೂಲ್​ನಲ್ಲಿ ಶನಿವಾರ ಸಂಜೆ 7ಕ್ಕೆ ಲಗ್ನಿಜಿತಾ ಚಕ್ರಬರ್ತಿ ಅವರ ಗಾಯನ ಕಾರ್ಯಕ್ರಮ ಶುರುವಾಗಿದೆ. ಮೊದಲ 45 ನಿಮಿಷ ಅವರು ವಿವಿಧ ಹಾಡುಗಳನ್ನು ಹಾಡಿದ್ದಾರೆ. ನಂತರ, ಸನ್ಮಾನ ಕಾರ್ಯಕ್ರಮವೂ ಸರಾಗವಾಗಿ ನಡೆದಿದೆ. ಅವರ ಏಳನೇ ಹಾಡು ದೇಬಿ ಚೌಧುರಾಣಿ ಎನ್ನುವ ಬಂಗಾಳಿ ಸಿನಿಮಾದ ‘ಜಾಗೋ ಮಾ’ ಆಗಿತ್ತು.
ಹಿಂದು ದೇವತೆಯನ್ನು ಸ್ತುತಿಸುವ ಈ ಹಾಡನ್ನು ಹಾಡಿದ ಬಳಿಕ ಲಗ್ನಜಿತಾ ಅವರು ಸಭಿಕರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ, ವೇದಿಕೆಗೆ ಏರಿ ಹೋದ ಮೆಹಬೂಬ್ ಮಲ್ಲಿಕ್ ಎನ್ನುವ ವ್ಯಕ್ತಿ, ಲಗ್ನಜಿತಾ ಅವರನ್ನು ನಿಂದಿಸಿ ಹೊಡೆಯಲು ಯತ್ನಿಸಿದ್ದಾನೆ. ‘ಜಾಗೋ ಮಾ ಹಾಡಿದ್ದು ಸಾಕು. ಈಗ ಏನಾದರೂ ಸೆಕ್ಯೂಲರ್​ನಂಥದ್ದು ಹಾಡು’ ಎಂದು ಮಲ್ಲಿಕ್ ಜಬರ್ದಸ್ ಮಾಡಿದ್ದು ಮೈಕ್​ನಲ್ಲಿ ಎಲ್ಲರಿಗೂ ಕೇಳಿಸಿದೆ. ಈತ ವೇದಿಕೆ ಮೇಲೆ ಏರಿ ಹೋಗಿ ಲಗ್ನಜಿತಾ ಮೇಲೆ ಹಲ್ಲೆಗೆ ಮುಂದಾಗುತ್ತಿರುವಂತೆಯೇ ಕೆಲವರು ಓಡಿ ಬಂದು ತಡೆದಿದ್ದಾರೆ.

ಈ ಘಟನೆ ಬಳಿಕ ಲಗ್ನಜಿತಾ ಅವರು ಕಾರ್ಯಕ್ರಮವನ್ನು ಅಲ್ಲಿಗೇ ನಿಲ್ಲಿಸಿ ಹೊರಟು ಹೋಗಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ಇದಾದ ಬಳಿಕ ಪೊಲೀಸರು ಮೆಹಬೂಬಾ ಮಲ್ಲಿಕ್​ರನ್ನು ಬಂಧಿಸಿದ್ದಾರೆ.

ಕಳೆದ ವರ್ಷದ (2024) ದುರ್ಗಾ ಪೂಜೆಯಂದು ಬಿಡುಗಡೆಯಾದ ದೇಬಿ ಚೌಧುರಾಣಿ ಸಿನಿಮಾದ ಹಿಟ್ ಹಾಡು ‘ಜಾಗೋ ಮಾ’. ಇದನ್ನು ಸಿನಿಮಾಗೆ ಹಾಡಿದವರು ಇದೇ ಗಾಯಕಿ ಲಗ್ನಜಿತಾ ಚಕ್ರಬರ್ತಿ.

error: Content is protected !!