Monday, December 22, 2025

ನಟಿ ನಿಧಿ ಅಗರ್ವಾಲ್ ಬಳಿಕ ಸಮಂತಾ ಮೇಲೆ ಮುಗಿ ಬಿದ್ದ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನಲ್ಲಿ ಪದೇ ಪದೇ ಅಭಿಮಾನಿಗಳಿಂದ ಸಿನಿಮಾ ನಟ ನಟಿಯರ ಮೇಲಿನ ಅಭಿಮಾನ ಅತಿರೇಖದ ವರ್ತನೆಗಳು ವರದಿಯಾಗುತ್ತಿದೆ. ಇತ್ತೀಚೆಗೆ ನಟಿ ನಿಧಿ ಅಗರ್ವಾಲ್ ಮೇಲೆ ಅಭಿಮಾನಿಗಳು ತೋರಿದ ಅತೀರೇಖದ ವರ್ತನೆ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ನಟಿ ಸಮಂತ್ ರುತ್ ಪ್ರಭು ಮೇಲೆ ಅಭಿಮಾನಿಗಳು ಮುಗಿ ಬಿದ್ದ ಘಟನೆ ನಡೆದಿದೆ.

ಫ್ಯಾನ್ಸ್‌ನಿಂದ ನಟಿ ಸಮಂತಾ ಸುರಕ್ಷಿತವಾಗಿ ಹೊರತರಲು ಬೌನ್ಸರ್, ಭದ್ರತಾ ಪಡೆಗಳು ಹರಸಾಹಸ ಮಾಡಿದ್ದಾರೆ. ನಟಿಯ ಪರದಾಟದ ದೃಶ್ಯಗಳು ಸೆರೆಯಾಗಿದೆ.

ನಟಿ ಸಮಂತಾ ರುತ್ ಪ್ರಭು ಹೈದರಾಬಾದ್‌ನಲ್ಲಿ ಕಾರ್ಯಕ್ರಮ ನಿಮಿತ್ತ ತೆರಳಿದ್ದಾರೆ. ಆದರೆ ಸೆಕ್ಯೂರಿಟಿ ಗಾರ್ಡ್‌ಗಳ ಜೊತೆ ಹೊರಬಂದ ನಟಿ ಸಮಂತ ಸುತ್ತ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಅಭಿಮಾನಿಗಳ ನೂಕು ನುಗ್ಗಲಿನಲ್ಲಿ ಸಮಂತ ಪರದಾಡಿದ್ದಾರೆ. ಸೆಕ್ಯೂರಿಟಿ ಗಾರ್ಡ್, ಪೊಲೀಸ್ ಎಷ್ಟೇ ಪ್ರಯತ್ನ ಮಾಡಿದರೂ ಅಭಿಮಾನಿಗಳ ನಿಯಂತ್ರಿಸಲು ಸಾಧ್ಯವಾಗಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ನಟಿ ಸಮಂತಾ ಕೈಕುಲುಕಲು, ಫೋಟೋ ಕ್ಲಿಕ್ಕಿಸಲು ನೂಕು ನುಕ್ಕಲು ಸೃಷ್ಟಿಸಿದ್ದಾರೆ.

ನಟಿ ಸಮಂತಾ ರುತ್ ಪ್ರಭುವನ್ನು ಕಾರು ಹತ್ತಿಸಲು ಸೆಕ್ಯೂರಿಟಿ ಗಾರ್ಡ್ ಸುಸ್ತಾಗಿದ್ದಾರೆ. ಅಭಿಮಾನಿಗಳ ನೂಕು ನುಗ್ಗಲಿನಲ್ಲಿ ನಟಿ ಸಮಂತ ತಾಳ್ಮೆ ಕಳೆದುಕೊಂಡಿಲ್ಲ. ಸುರಕ್ಷಿತವಾಗಿ ನಟಿ ಸಮಂತಾ ಕಾರು ಹತ್ತಿ ಸ್ಥಳದಿಂದ ತೆರಳಿದ್ದಾಳೆ. ಹೀಗಾಗಿ ನಟಿ ನಿಧಿ ಅಗರ್ವಾಲ್ ರೀತಿ ಪರಿಸ್ಥಿತಿಯನ್ನು ಸಮಂತಾ ಎದುರಿಸಲಿಲ್ಲ.

ನಿಧಿ ಅಗರ್ವಾಲ್ ಹಿಡಿದೆಳೆಡಾದಿ ಫ್ಯಾನ್ಸ್
ಇತ್ತೀಚೆಗೆ ಸಿನಿಮಾ ಪ್ರಮೋಶನ್‌ಗಾಗಿ ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟಿ ನಿಧಿ ಅಗರ್ವಾಲ್ ಮೇಲೆ ಫ್ಯಾನ್ಸ್ ಮುಗಿಬಿದ್ದಿದ್ದು ಮಾತ್ರವಲ್ಲ,ಬಟ್ಟೆಯನ್ನೂ ಹಿಡಿದು ಎಳೆದಾಡಿದ್ದಾರೆ. ಅಭಿಮಾನಿಗಳ ಅತಿರೇಖದ ವರ್ತನೆ ತೋರಿದ್ದರು.ನಿಧಿ ಅಗರ್ವಾಲ್ ಕಣ್ಣೀರಿಡುತ್ತಲೆ ಸ್ಥಳದಿಂದ ಕಾರು ಹತ್ತಿದ್ದರು.

error: Content is protected !!