Monday, December 22, 2025

ಪವಿತ್ರ ನಗರಗಳ ಘನತೆ ಹೆಚ್ಚಿಸಲು ಪಂಜಾಬ್ ಸಜ್ಜು: ಮಾಂಸ-ಮದ್ಯ ಮಾರಾಟಕ್ಕೆ ಬ್ರೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್‌ನ ಆಮ್ ಆದ್ಮಿ ಸರ್ಕಾರವು ರಾಜ್ಯದ ಧಾರ್ಮಿಕ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸಿಖ್ಖರ ಪರಮ ಪವಿತ್ರ ಕ್ಷೇತ್ರಗಳಾದ ಅಮೃತಸರ, ತಲ್ವಾಂಡಿ ಸಾಬೊ ಮತ್ತು ಆನಂದಪುರ್ ಸಾಹಿಬ್ ನಗರಗಳನ್ನು ಅಧಿಕೃತವಾಗಿ ‘ಪವಿತ್ರ ನಗರ’ಗಳೆಂದು ಘೋಷಿಸಲಾಗಿದೆ.

ಈ ಮೂರೂ ನಗರಗಳ ವ್ಯಾಪ್ತಿಯಲ್ಲಿ ಮದ್ಯ, ಮಾಂಸ, ತಂಬಾಕು ಹಾಗೂ ಇನ್ನಿತರ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಕಳೆದ ನವೆಂಬರ್‌ನಲ್ಲಿ ಅಂಗೀಕರಿಸಲಾಗಿದ್ದ ಈ ವಿಶೇಷ ಕಾಯ್ದೆಯು ಭಾನುವಾರದಿಂದ ರಾಜ್ಯಾದ್ಯಂತ ಅಧಿಕೃತವಾಗಿ ಜಾರಿಗೆ ಬಂದಿದೆ.

ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್, ಧಾರ್ಮಿಕ ನಗರಗಳ ಪಾವಿತ್ರ್ಯತೆಯನ್ನು ಕಾಪಾಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

error: Content is protected !!