Monday, December 22, 2025

FOOD | ಅನ್ನ, ಚಪಾತಿ ಎರಡಕ್ಕೂ ಸೈ ಈ ಕಾಲಿಫ್ಲವರ್ ಡ್ರೈ ಕರಿ!

ಮಧ್ಯಾಹ್ನದ ಊಟದ ಜೊತೆಯಲ್ಲಾಗಲಿ, ಅಥವಾ ಚಪಾತಿ–ರೋಟಿಗೆ ಸೈಡ್ ಡಿಷ್ ಬೇಕಾದಾಗ ಕಾಲಿಫ್ಲವರ್ ಡ್ರೈ ಕರಿ ಮಾಡಿ. ಕಡಿಮೆ ಎಣ್ಣೆಯಲ್ಲಿ ಸುಲಭವಾಗಿ ತಯಾರಾಗುವ ಈ ಪಲ್ಯ ರುಚಿಯಲ್ಲಿ ಮಸ್ತ್ ಆಗಿರೋದು ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು.

ಅಗತ್ಯ ಪದಾರ್ಥಗಳು

ಕಾಲಿಫ್ಲವರ್ – 1 ಮಧ್ಯಮ ಗಾತ್ರ (ಚಿಕ್ಕ ಚಿಕ್ಕ ತುಂಡುಗಳು)
ಈರುಳ್ಳಿ – 1 (ಸಣ್ಣಗೆ ಕತ್ತರಿಸಿದ)
ಹಸಿಮೆಣಸು – 2 (ಸಣ್ಣಗೆ ಕತ್ತರಿಸಿದ)
ಬೆಳ್ಳುಳ್ಳಿ – 4 ಕಾಯಿ (ಸಣ್ಣಗೆ ನುರಿದ)
ಎಣ್ಣೆ – 2 ಟೇಬಲ್ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಅರಿಶಿನ ಪುಡಿ – ½ ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ

ಮೊದಲು ಕಾಲಿಫ್ಲವರ್ ತುಂಡುಗಳನ್ನು ಉಪ್ಪು ಹಾಕಿದ ಬಿಸಿ ನೀರಲ್ಲಿ 5 ನಿಮಿಷ ನೆನೆಸಿಟ್ಟು, ನೀರು ಹಿಂಡಿ ಬೇರ್ಪಡಿಸಿ. ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಹಾಕಿ ಸಿಡಿದ ನಂತರ ಈರುಳ್ಳಿ, ಹಸಿಮೆಣಸು ಮತ್ತು ಬೆಳ್ಳುಳ್ಳಿ ಹಾಕಿ ಬಂಗಾರದ ಬಣ್ಣ ಬರುವವರೆಗೂ ಹುರಿಯಿರಿ. ಬಳಿಕ ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ ಹಾಕಿ ಚೆನ್ನಾಗಿ ಕಲಸಿ. ಈಗ ಕಾಲಿಫ್ಲವರ್ ಸೇರಿಸಿ ಮಧ್ಯಮ ಉರಿಯಲ್ಲಿ ಮುಚ್ಚಿ ಬೇಯಿಸಿ. ಕೊನೆಗೆ ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ, ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.

error: Content is protected !!