Monday, December 22, 2025

HEALTH | ನೈಟ್‌ ಶಿಫ್ಟ್‌ ಮಾಡುವವರು ಒಮ್ಮೆ ಕಣ್ಣಾಡಿಸಿ, ಸಮಸ್ಯೆ ಏನು ಗೊತ್ತಾ?

ಬೆಳಗ್ಗೆ ಎದ್ದೆ ಆಫೀಸ್‌ಗೆ ಹೋದೆ, ಕೆಲಸ ಮಾಡಿದೆ, ಮನೆಗೆ ಬಂದು ಊಟ ಮುಗಿಸಿ ಮಲಗಿದೆ. ಇದು ಮಾಮೂಲಿ ಜನರ ಮಾಮೂಲಿ ರೊಟೀನ್‌. ಆದರೆ ನೈಟ್‌ಶಿಫ್ಟ್‌ ಮಾಡೋರ ಕಥೆ ಹೇಗಿರತ್ತೆ ಗೊತ್ತಾ? ಜಗತ್ತೆಲ್ಲಾ ಎದ್ದಾಗ ಅವರು ಮಲಗ್ತಾರೆ, ಜಗತ್ತೆಲ್ಲ ಮಲಗಿದ್ದಾಗ ಎದ್ದು ಕೆಲಸ ಮಾಡ್ತಾರೆ. ಬೆಳಗ್ಗೆ ಬೆಳಕಿಗೆ ನಿದ್ದೆ ಬರೋದಿಲ್ಲ, ಜತೆಯಲ್ಲಿ ಮನೆಯಲ್ಲಿ ಸದ್ದು, ಹೋಗೋರು ಬರೋರ ಸೌಂಡ್‌, ಯಾರಾದ್ರೂ ಫೋನ್‌ ಮಾಡಿ ಡಿಸ್ಟರ್ಬ್‌ ಮಾಡ್ತಾರೆ. ಇದೆಲ್ಲ ಒಂದು ರೀತಿ ಕಿರಿಕಿರಿ ಆದರೆ ಆರೋಗ್ಯದಲ್ಲಿ ಭಾರೀ ವ್ಯತ್ಯಾಸ ಆಗುತ್ತದೆ. ಹೇಗೆ ನೋಡಿ..

ಮೊದಲನೆಯದಾಗಿ ಹಗಲಿನಲ್ಲಿ ನಿದ್ರಿಸುವ ಮೂಲಕ ರಾತ್ರಿಯ ನಿದ್ರೆಯ ಕೊರತೆ ಸರಿದೂಗಿಸಲು ಸಾಧ್ಯವಿಲ್ಲ. ಕಾರಣ ಸರಿಯಾಗಿ ನಿದ್ರೆ ಮಾಡಲು ಅಸಾಧ್ಯ. ಎರಡನೆಯದು ವಿವಿಧ ರೋಗಗಳ ಅಪಾಯ ಹೆಚ್ಚಿಸುತ್ತದೆ. ರಾತ್ರಿಯಲ್ಲಿ ಕೆಲಸ ಮಾಡುವ ಜನರಲ್ಲಿ ಕಿಡ್ನಿಸ್ಟೋನ್ ಸಾಧ್ಯತೆ ಹೆಚ್ಚಿರುತ್ತದೆ. ಮೂತ್ರಪಿಂಡದಲ್ಲಿ ಕಲ್ಲುಗಳು ಬೆಳೆಯಲು ಕಾರಣವಾಗುತ್ತದೆ. ರಾತ್ರಿ ವೇಳೆ ದೈಹಿಕ ಚಟುವಟಿಕೆ ಕಡಿಮೆ ಇರುತ್ತದೆ. ಅದರಿಂದ ಅಪಾಯ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ.

ದೇಹದ ತೂಕ, ನೀರಿನ ಸೇವನೆ ಮತ್ತು ಇತರ ಜೀವನಶೈಲಿ ಅಂಶಗಳು ಕಿಡ್ನಿಸ್ಟೋನ್​ಗೆ ಪ್ರಮುಖ ಕಾರಣ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ನೌಕರರು ತಮ್ಮ ಜೀವನಶೈಲಿಯನ್ನು ಸರಿಯಾಗಿ ನಿಭಾಯಿಸಲು ಹೆಣಗಾಡುತ್ತಾರೆ. ಇದು ಅವರ ದೇಹದ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ. ಇದು ನಿದ್ರೆ, ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ಹೇಳಿದೆ. 

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರಲ್ಲಿ ಮೂತ್ರಪಿಂಡದ ಕಲ್ಲುಗಳು ಬರುವ ಅಪಾಯ ಶೇಕಡಾ 15 ರಷ್ಟು ಹೆಚ್ಚಾಗಿದೆ. ಈ ಅಪಾಯವು ಧೂಮಪಾನ, ನಿದ್ರೆಯ ಕೊರತೆ, ಸಾಕಷ್ಟು ನೀರು ಸೇವನೆ ಇಲ್ಲದಿರೋದು ಮತ್ತು ಅಧಿಕ ತೂಕದಿಂದ ಸಂಭವಿಸುತ್ತದೆ ಎಂದು ಸಂಶೋಧನೆ ಮಾಡಿದ ತಂಡವೊಂದರಲ್ಲಿ ಅಧ್ಯಯನದಲ್ಲಿದೆ.

error: Content is protected !!