Sunday, December 21, 2025

ಟರ್ಕಿಯಲ್ಲಿ 6.1 ತೀವ್ರತೆಯ ಭೂಕಂಪ: ಓರ್ವ ಮೃತ್ಯು, 29 ಮಂದಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೂಕಂಪ ಪೀಡಿತ ರಾಷ್ಟ್ರವಾದ ಟರ್ಕಿಯ ವಾಯುವ್ಯ ಪ್ರಾಂತ್ಯ ಬಲಿಕೆಸಿರ್ ಎಂಬಲ್ಲಿ ಭಾನುವಾರ ಸಂಜೆ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ.

ಬಲಿಕೆಸಿರ್ ಪ್ರಾಂತ್ಯದ ಸಿಂದಿರಗಿಯಲ್ಲಿ 11 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಪರಿಣಾಮ 200 ಕಿ.ಮೀ. ದೂರದ ಇಸ್ತಾಂಬುಲ್ ಮತ್ತು ಇಜ್ಜಿರ್‌ನಲ್ಲೂ ಕಂಪನದ ಅನುಭವ ಆಗಿದೆ ಎಂದು ಮೂಲಗಳು ತಿಳಿಸಿವೆ.

error: Content is protected !!