Wednesday, December 24, 2025

ದಿತ್ವ ಚಂಡಮಾರುತ | ಶ್ರೀಲಂಕಾಗೆ ಭಾರತದಿಂದ ಭಾರೀ ನೆರವು: 4 ಸಾವಿರ ಕೋಟಿ ರೂ. ಪುನರ್ ನಿರ್ಮಾಣ ಪ್ಯಾಕೇಜ್ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿತ್ವ ಚಂಡಮಾರುತದಿಂದ ಗಂಭೀರ ಹಾನಿಗೆ ಒಳಗಾಗಿರುವ ಶ್ರೀಲಂಕಾಗೆ ಭಾರತ ಮತ್ತೊಮ್ಮೆ ಮಾನವೀಯ ನೆಲೆಯೊಂದಿಗೆ ಸಹಾಯ ಹಸ್ತ ಚಾಚಿದೆ . ಭಾರತದ ‘ನೆರೆಹೊರೆ ಮೊದಲು’ ಹಾಗೂ ‘ಮಹಾಸಾಗರ್’ ನೀತಿಗಳ ಭಾಗವಾಗಿ, ದ್ವೀಪ ರಾಷ್ಟ್ರದ ಪುನರ್ ನಿರ್ಮಾಣಕ್ಕಾಗಿ ಸುಮಾರು 4 ಸಾವಿರ ಕೋಟಿ ರೂ. ಮೊತ್ತದ ನೆರವು ಪ್ಯಾಕೇಜ್ ಘೋಷಿಸಲಾಗಿದೆ.

ಈ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬಿಕ್ಕಟ್ಟಿನ ಸಮಯದಲ್ಲಿ ನೆರೆಯ ದೇಶದೊಂದಿಗೆ ನಿಲ್ಲುವುದು ಭಾರತದ ಕರ್ತವ್ಯ ಎಂದು ಹೇಳಿದ್ದಾರೆ.

ಚಂಡಮಾರುತದಿಂದ ಶ್ರೀಲಂಕಾದ ಮೂಲಸೌಕರ್ಯ, ವಸತಿ ಹಾಗೂ ಸಾರ್ವಜನಿಕ ವ್ಯವಸ್ಥೆಗಳಿಗೆ ಭಾರೀ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತವು 450 ಮಿಲಿಯನ್ ಯುಎಸ್ ಡಾಲರ್ ಮೊತ್ತದ ಆರ್ಥಿಕ ನೆರವನ್ನು ನೀಡುತ್ತಿರುವುದಾಗಿ ಜೈಶಂಕರ್ ಸ್ಪಷ್ಟಪಡಿಸಿದ್ದಾರೆ. ದಿತ್ವ ಚಂಡಮಾರುತದ ಪರಿಣಾಮಗಳಿಂದ ಚೇತರಿಸಿಕೊಳ್ಳಲು ಶ್ರೀಲಂಕಾಗೆ ಸಾಕಷ್ಟು ಸಮಯ ಬೇಕಾಗಬಹುದು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.

error: Content is protected !!