Thursday, December 25, 2025

ರತ್ನ ಖಚಿತ ರಾಮಲಲಾ ವಿಗ್ರಹ: ಅಯೋಧ್ಯೆಯ ರಾಮ ಮಂದಿರಕ್ಕೆ ಭವ್ಯ ಕಾಣಿಕೆ ನೀಡಿದ ಕರ್ನಾಟಕದ ಭಕ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯ ರಾಮಲಲಾ ದೇವಾಲಯದ ಆವರಣದಲ್ಲಿ ಶೀಘ್ರದಲ್ಲೇ ಅಪೂರ್ವ ವೈಭವದ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಚಿನ್ನ, ಬೆಳ್ಳಿ, ವಜ್ರ, ಪಚ್ಚೆ ಸೇರಿದಂತೆ ಅಮೂಲ್ಯ ರತ್ನಗಳಿಂದ ಅಲಂಕರಿಸಲಾದ ಭವ್ಯ ಪ್ರತಿಮೆಯನ್ನು ಕರ್ನಾಟಕದ ಭಕ್ತರೊಬ್ಬರು ದಾನ ಮಾಡಿದ್ದು, ಮಂಗಳವಾರ ಸಂಜೆ ಈ ವಿಗ್ರಹವನ್ನು ಅಯೋಧ್ಯೆಗೆ ತರಲಾಗಿದೆ.

ಸುಮಾರು 10 ಅಡಿ ಎತ್ತರ ಮತ್ತು 8 ಅಡಿ ಅಗಲ ಹೊಂದಿರುವ ಈ ಪ್ರತಿಮೆ ದಕ್ಷಿಣ ಭಾರತದ ಸಾಂಪ್ರದಾಯಿಕ ಶಿಲ್ಪಕಲಾ ಶೈಲಿಯಲ್ಲಿ ನಿರ್ಮಿತವಾಗಿದ್ದು, ಅದರ ಸೌಂದರ್ಯ ಎಲ್ಲರ ಗಮನ ಸೆಳೆಯುತ್ತಿದೆ.

ಈ ವಿಗ್ರಹದ ಅಂದಾಜು ಮೌಲ್ಯ 25ರಿಂದ 30 ಕೋಟಿ ರೂಪಾಯಿ ನಡುವೆ ಇರುವುದಾಗಿ ತಿಳಿದುಬಂದಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಡಾ. ಅನಿಲ್ ಮಿಶ್ರಾ ಮಾಹಿತಿ ನೀಡಿದ್ದು, ದಾನಿಯ ಗುರುತು ಈ ಹಂತದಲ್ಲಿ ಬಹಿರಂಗವಾಗಿಲ್ಲ ಎಂದಿದ್ದಾರೆ. ವಿಗ್ರಹದ ತೂಕವನ್ನು ಅಳೆಯುವ ಪ್ರಕ್ರಿಯೆ ಮುಂದುವರೆದಿದ್ದು, ಅದು ಸುಮಾರು ಐದು ಕ್ವಿಂಟಾಲ್‌ಗಳಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

error: Content is protected !!