Wednesday, December 24, 2025

ನಾವು ಹೋರಾಡ್ಬೇಕಾಗಿರೋದು ಇದರ ವಿರುದ್ಧ! ಸ್ಟಾರ್‌ವಾರ್‌ ಬಗ್ಗೆ ಮಾತನಾಡಿದ ನಟಿ ರಕ್ಷಿತಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾವು ಇಂಡಸ್ಟ್ರಿಯವರು ಸದಾ ಒಗ್ಗಟ್ಟಿನಲ್ಲಿ ಇರಬೇಕು. ಎಲ್ಲರೂ ಪೈರಸಿ ವಿರುದ್ಧ ಹೋರಾಡಬೇಕು ಎಂದು ನಟಿ ರಕ್ಷಿತಾ ಹೇಳಿದ್ದಾರೆ.

ಕಿಚ್ಚ ಸುದೀಪ್ ಹುಬ್ಬಳ್ಳಿಯ ವೇದಿಕೆ ಮೇಲೆ ಆಡಿದ ಮಾತುಗಳು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿ ಮಾಡಿದ್ದವು. ಇದ್ರ ಬೆನ್ನಲ್ಲೇ ದಾವಣಗೆರೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಭಿಮಾನಿಗಳ ಮುಂದೆ ಮಾತಾಡಿದ ಮಾತುಗಳು ಮತ್ತಷ್ಟು ಅಭಿಮಾನಿಗಳನ್ನ ರೊಚ್ಚಿಗೆಬ್ಬಿಸಿವೆ. ಈ ಮಾತುಗಳು ಇಂಡಸ್ಟ್ರಿಯಲ್ಲಿ ಬೇರೆ ರೀತಿಯ ಆಯಾಮಗಳನ್ನು ಪಡೆದುಕೊಂಡಿದಿವೆ.

ಸುದೀಪ್ ಅವರು ಮಾತಾಡಿದ್ದು ಪೈರಸಿ ಬಗ್ಗೆ. ದರ್ಶನ್ ಅವರಿಗೆ ಮಾತಾಡಿದ್ದಾರೆ ಅಂತಾ ಅನ್ನಿಸ್ತಿಲ್ಲ. ದರ್ಶನ್ ಹಾಗೂ ಸುದೀಪ್ ಸ್ನೇಹಿತರು, ವಿಜಯಲಕ್ಷ್ಮಿ ದರ್ಶನ್ ನನಗೆ ತುಂಬಾ ವರ್ಷಗಳ ಪರಿಚಯ. ಅವ್ರು ಒಬ್ಬ ವ್ಯಕ್ತಿ ಮೇಲೆ ಬೆರಳು ತೋರಿಸಿ ಮಾತಾಡಿದ್ರು ಅಂತಾ ಅನ್ಸಲ್ಲ. ಇಂಡಸ್ಟ್ರಿಯಲ್ಲಿ ಎಲ್ಲರೂ ಒಟ್ಟಾಗಿರಬೇಕು ಎಂದಿದ್ದಾರೆ.

error: Content is protected !!