Wednesday, December 24, 2025

ಬಾಂಗ್ಲಾದೇಶ ಮತ್ತೆ ಭುಗಿಲೆದ್ದ ಹಿಂಸಾಚಾರ: ಬಾಂಬ್ ದಾಳಿಗೆ ವ್ಯಕ್ತಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶ ಹಿಂಸಾಚಾರ ಮುಂದುವರಿದ್ದು, ಈ ನಡುವೆ ರಾಜಧಾನಿ ಢಾಕಾದ ಮೋಘಬಜಾರ್ ಪ್ರದೇಶದಲ್ಲಿ ಬುಧವಾರ ಸಂಜೆ ಬಾಂಬ್ ದಾಳಿಯಾಗಿದೆ.

ಇಲ್ಲಿಯ ಫ್ಲೈಓವರ್ ಮೇಲಿಂದ ಅಪರಿಚಿತ ದುಷ್ಕರ್ಮಿಗಳು ಕಚ್ಛಾ ಬಾಂಬ್ಅನ್ನು ಎಸೆದಿದ್ದಾರೆ. ಕೆಳಗೆ ರಸ್ತೆಬದಿಯಲ್ಲಿ ಚಹಾ ಕುಡಿಯುತ್ತಿದ್ದ ವ್ಯಕ್ತಿಯ ತಲೆ ಮೇಲೆ ಬಾಂಬ್ ಬಿದ್ದು ಸ್ಫೋಟಗೊಂಡಿದೆ. ಪರಿಣಾಮವಾಗಿ, ಆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬುಧವಾರ ಸಂಜೆ 7 ಗಂಟೆಗೆ ಈ ಘಟನೆ ಸಂಭವಿಸಿರುವುದು ತಿಳಿದುಬಂದಿದೆ. ಬಾಂಬ್​ಗೆ ಬಲಿಯಾದ ವ್ಯಕ್ತಿ 21 ವರ್ಷದ ಯುವಕ ಸೈಫುಲ್ ಎಂದು ಗುರುತಿಸಲಾಗಿದೆ.

ರಸ್ತೆಬದಿ ಅಂಗಡಿಯಲ್ಲಿ ಸೈಫೂಲ್ ಚಹಾ ಸೇವಿಸುತ್ತಿದ್ದಾಗ, ಫ್ಲೈ ಓವರ್ ಮೇಲಿಂದ ಎಸೆಯಲಾದ ಕಚ್ಛಾ ಬಾಂಬ್ ಆತನ ಮೇಲೆ ಬಿದ್ದಿದೆ. ತಲೆಗೆ ತೀವ್ರ ಪೆಟ್ಟು ಬಿದ್ದು ವಿಪರೀತ ರಕ್ತ ಸ್ರಾವವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ ಎಂದು ಢಾಕಾದ ಹಾತಿರ್ಜೀಲ್ ಪೊಲೀಸ್ ಸ್ಟೇಷನ್ ಇನ್ಸ್​ಪೆಕ್ಟರ್ ಹೇಳಿದ್ದಾರೆ.

ಬಾಂಬ್ ನೇರವಾಗಿ ತಲೆಗೆ ಬಡಿದು ಸ್ಫೋಟಗೊಂಡಿದ್ದರಿಂದ ಸೈಫುಲ್​ನ ತಲೆಯಿಂದ ಮಿದುಳು ಹೊರಬಂದು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಭಯಾನಕ ದೃಶ್ಯವನ್ನು ಬಣ್ಣಿಸಿದ್ದಾರೆ.

error: Content is protected !!