ಹೊಸದಿಗಂತ ವರದಿ ವಿಜಯಪುರ:
ಭಾರತದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗೆ ಹಾಕಬೇಕು. ಇಲ್ಲದೇ ಹೋದರೆ ನಮ್ಮ ಭಾರತ ಉಳಿವುದಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಾಂಗ್ಲಾ ದೇಶದಲ್ಲಿ ಮುಗ್ಧ ಹಿಂದೂ ಯುವಕನ ಸಜೀವ ದಹನ ಆಗಿದೆ. ಇದು ನೋವಿನ ಸಂಗತಿ ಎಂದರು.
ಅಕ್ರಮ ಬಾಂಗ್ಲಾ ವಲಸಿಗರಿಗೆ ಸಾತ್ ನೀಡುವವರನ್ನು ಒದ್ದು ಹೊರಗೆ ಹಾಕಬೇಕು. ಕಾಂಗ್ರೆಸ್ ಹಾಗೂ ಅಲ್ಪಸಂಖ್ಯಾತರ ಪಕ್ಷಗಳು ಬಾಂಗ್ಲಾ ವಲಸಿಗರನ್ನು ಓಟ ಬ್ಯಾಂಕ್ ಮಾಡಿಕೊಂಡಿದ್ದಾರೆ. ಹೀಗಾಗಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಅಂತಿಮ ಗಡುವು ನಿಡಬೇಕು. ಗಡುವು ಬಳಿಕ ಬಾಂಗ್ಲಾದೇಶಕ್ಕೆ ಹೋಗದೇ ಇದ್ದರೆ ಗುಂಡಿಕ್ಕಿ ಕೊಲ್ಲಬೇಕು ಎಂದು ಕಿಡಿಕಾರಿದರು.
ಚಿತ್ರದುರ್ಗದಲ್ಲಿ ಭೀಕರ ಬಸ್ ದುರಂತ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಚಿತ್ರದುರ್ಗ ಬಸ್ ದುರಂತ ತನಿಖೆ ಆಗಬೇಕು. ರಾಜ್ಯದಲ್ಲಿನ ಬಸ್ ಯಾಕೇ ದುರಂತ ಆಗುತ್ತಿವೆ ಎನ್ನುವುದು ಪರಿಶೀಲನೆ ಮಾಡಬೇಕು ಎಂದರು.
ಯಾವ ಕಾರಣದಿಂದ ಬಸ್ ಸುಡುತ್ತಿವೆ ಎನ್ನುವುದು ಪರಿಶೀಲನೆ ಆಗಬೇಕು. ಈ ಬಸ್ ದುರಂತ ತನಿಖೆ ಆಗಬೇಕು. ಅಮಾಯಕರ ಜೀವ ದಹನ ಆಗುವುದು ನೋವಿನ ಸಂಗತಿ. ಡೇಂಜರ್ ಬಸ್‌ಗಳ ಲೈಸೆನ್ಸ್‌ಗಳನ್ನು ರದ್ದು ಮಾಡಬೇಕು ಎಂದರು.
ಸಾರಿಗೆ ಇಲಾಖೆಯವರು ಎಲ್ಲವನ್ನೂ ಪರೀಕ್ಷೆ ಮಾಡಬೇಕು. ಮೃತ ಕುಟುಂಬಸ್ಥರಿಗೆ ದೇವರು ಧೈರ್ಯ ನೀಡಲಿ ಎಂದು ನಾನು ಸಂತಾಪ ಸೂಚಿಸಿತ್ತೇನೆ ಎಂದರು.

