ಮೇಷ
ಇತ್ತೀಚಿಗೆ ಕೆಲಸದ ಪರಾಮರ್ಶೆ ನಡೆಸಿ. ಲೋಪ ತಿದ್ದಿಕೊಳ್ಳಿ. ನಿಮ್ಮ ಕೆಲಸ ಟೀಕಿಸಲ್ಪಟ್ಟರೆ ಆ ಕುರಿತು ಅತಿಯಾಗಿ ಚಿಂತಿಸಬೇಡಿ.
ವೃಷಭ
ದುಡುಕಿನ ನಡೆ ಸಾಮರಸ್ಯ ಕೆಡಿಸೀತು. ನಿಮ್ಮ ಮನೋಭಾವ ನಿಯಂತ್ರಿಸಿಕೊಳ್ಳಿ. ಕೆಲಸದ ಒತ್ತಡದಿಂದ ವಿರಾಮ ಪಡೆಯುವುದೊಳಿತು.
ಮಿಥುನ
ಆತ್ಮೀಯ ಸಂಬಂಧ ಕೆಡದಂತೆ ಎಚ್ಚರ ವಹಿಸಿ. ಅನುಮಾನದ ಧೋರಣೆ ಬಿಡಿ. ವ್ಯವಹಾರದಲ್ಲಿ ಏರುಪೇರು ಸಂಭವ. ಆರ್ಥಿಕ ಒತ್ತಡ.
ಕಟಕ
ವೃತ್ತಿ ಒತ್ತಡ ಎದುರಿಸುವಿರಿ. ಆದರೆ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಆಪ್ತರ ಜತೆ ಭಿನ್ನಮತ ಸಂಭವ. ಹೊಂದಾಣಿಕೆ ಒಳಿತು.
ಸಿಂಹ
ಸಂತೋಷದ ದಿನ. ನಿಮ್ಮ ನಿರ್ಧಾರ ದೂರಗಾಮಿ ಪರಿಣಾಮ ಬೀರಲಿದೆ. ಆತ್ಮೀಯರ ಪ್ರೀತಿ, ವಿಶ್ವಾಸ ಗಳಿಸುವಿರಿ. ಕುಟುಂಬ ಸೌಹಾರ್ದ.
ಕನ್ಯಾ
ಉತ್ಸಾಹದ ಮನಸ್ಥಿತಿ. ವ್ಯವಹಾರದಲ್ಲಿ ಹೊಸ ಅವಕಾಶ ತೆರೆಯಲಿದೆ. ಆರೋಗ್ಯದ ಕುರಿತಾದ ಚಿಂತೆ ನಿವಾರಣೆ. ಮಾನಸಿಕ ನಿರಾಳತೆ.
ತುಲಾ
ಸಾಮಾಜಿಕ, ಆರ್ಥಿಕ ಮತ್ತು ಖಾಸಗಿ ಬದ್ಧತೆ ಪೂರೈಸಲು ಅದ್ಯತೆ ಕೊಡಿ. ಬಿಡುವಿಲ್ಲದ ಕೆಲಸದಿಂದ ವಿರಾಮ ಪಡೆಯಿರಿ. ಆರೋಗ್ಯಕ್ಕೆ ಒಳಿತು.
ವೃಶ್ಚಿಕ
ಇಂದು ಹೊಸದರ ಅನ್ವೇಷಣೆಗೆ ಮನ ಮಾಡುವಿರಿ. ಏರುಪೇರು ಇಲ್ಲದ ಶಾಂತ ಮನಸ್ಥಿತಿ. ವ್ಯವಹಾರದಲ್ಲಿ ಆರ್ಥಿಕ ಅಡಚಣೆ ನಿವಾರಣೆ.
ಧನು
ಇತರರಿಂದ ದಕ್ಷತೆ, ವಿನಯ ನಿರೀಕ್ಷಿಸುವಿರಿ. ಅದಿಲ್ಲದೆ ಅಸಹನೆ. ಕೆಲವರ ವರ್ತನೆ ರೋಷ ಬರಿಸಬಹುದು. ತಾಳ್ಮೆಯಿಂದ ವರ್ತಿಸಿ.
ಮಕರ
ಕೆಲವರ ಬಗ್ಗೆ ವಿಧೇಯತೆ ಒಳ್ಳೆಯದೆ. ಆದರೆ ಅವರ ತಾಳಕ್ಕೆ ಕುಣಿಯಬೇಡಿ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ವಹಿಸುವಿರಿ.
ಕುಂಭ
ನಿಮ್ಮ ಯೋಜನೆ ಕಾರ್ಯಗತಗೊಳಿಸಲು ಹಿಂಜರಿಕೆ ಬೇಡ. ಯಶಸ್ಸು ಖಂಡಿತ. ದೈಹಿಕ ಸಮಸ್ಯೆ ಕಡೆಗಣಿಸಬೇಡಿ. ಏಕಾಂಗಿಗಳಿಗೆ ಸಂಗಾತಿ ಲಭ್ಯ
ಮೀನ
ನಿರ್ಲಕ್ಷಿಸಲ್ಪಟ್ಟ ಖಾಸಗಿ ಸಮಸ್ಯೆ ಒಮ್ಮೆಗೆ ಎದುರಾಗಬಹುದು. ಖರ್ಚು ತಗ್ಗಿಸಲು ಗಮನ ಕೊಡಿ. ವೃತ್ತಿಯಲ್ಲಿ ಉನ್ನತಿ, ಧನಪ್ರಾಪ್ತಿಯ ಸಾಧ್ಯತೆ.
ದಿನಭವಿಷ್ಯ: ಅನುಮಾನದ ಹುತ್ತ ಬೇಡ, ಆತ್ಮೀಯರೊಂದಿಗೆ ವಿಶ್ವಾಸದಿಂದಿರಿ.. ಟೀಕೆಗಳಿಗೆ ಕುಗ್ಗಬೇಡಿ

