Friday, December 26, 2025

ಐಸಿಸ್ ಹೆಡೆಮುರಿ ಕಟ್ಟಿದ ಟ್ರಂಪ್: ನೈಜೀರಿಯಾದಲ್ಲಿ ಉಗ್ರರ ಮೇಲೆ ಅಮೆರಿಕ ಅಟ್ಟಹಾಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಾದ್ಯಂತ ಕ್ರಿಸ್‌ಮಸ್ ಸಡಗರ ಮನೆಮಾಡಿರುವಾಗಲೇ, ಭಯೋತ್ಪಾದಕ ಸಂಘಟನೆ ಐಸಿಸ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧಘೋಷ ಮಾಡಿದ್ದಾರೆ. ನೈಜೀರಿಯಾದಲ್ಲಿ ಕ್ರೈಸ್ತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಮತ್ತು ಹತ್ಯೆಗಳನ್ನು ಖಂಡಿಸಿರುವ ಟ್ರಂಪ್, ಕ್ರಿಸ್‌ಮಸ್ ದಿನದಂದೇ ಉಗ್ರರ ನೆಲೆಗಳ ಮೇಲೆ ಮಾರಕ ವೈಮಾನಿಕ ದಾಳಿ ನಡೆಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ನೈಜೀರಿಯಾ ಸರ್ಕಾರದ ವಿಶೇಷ ಮನವಿಯ ಮೇರೆಗೆ ಅಮೆರಿಕ ರಕ್ಷಣಾ ಇಲಾಖೆ ಈ ಕಾರ್ಯಾಚರಣೆ ನಡೆಸಿದೆ. ಐಸಿಸ್ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಈ ದಾಳಿಯಲ್ಲಿ ಹಲವಾರು ಪ್ರಮುಖ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪೆಂಟಗನ್ ಖಚಿತಪಡಿಸಿದೆ.

ಈ ದಾಳಿಯ ಬೆನ್ನಲ್ಲೇ ಐಸಿಸ್‌ಗೆ ನೇರ ಎಚ್ಚರಿಕೆ ನೀಡಿರುವ ಟ್ರಂಪ್, “ಕ್ರಿಶ್ಚಿಯನ್ನರ ಮೇಲಿನ ಹತ್ಯಾಕಾಂಡವನ್ನು ತಕ್ಷಣವೇ ನಿಲ್ಲಿಸದಿದ್ದರೆ, ನೀವು ನರಕದ ಯಾತನೆಯನ್ನು ಭೂಮಿಯ ಮೇಲೆಯೇ ಅನುಭವಿಸಬೇಕಾಗುತ್ತದೆ” ಎಂದು ಗುಡುಗಿದ್ದಾರೆ.

error: Content is protected !!