ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹಿಂದೆಂದೂ ಕಾಣದ ರೀತಿಯಲ್ಲಿ ಏರಿಕೆಯಾಗುತ್ತಿದ್ದು, ಪ್ರತಿದಿನ ಹೊಸ ದಾಖಲೆಗಳನ್ನು ನಿರ್ಮಿಸುತ್ತಿವೆ. ಹೂಡಿಕೆದಾರರು ಮತ್ತು ಗ್ರಾಹಕರಲ್ಲಿ ಆತಂಕ ಮೂಡಿಸುವಂತೆ ಬೆಲೆಗಳು ಗಗನಮುಖಿಯಾಗಿವೆ.
ಕಳೆದ ಎರಡು ದಿನಗಳಿಂದ ಪ್ರತಿ ಗ್ರಾಮ್‌ಗೆ 30 ರೂ. ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ, ಇಂದು ಒಂದೇ ದಿನ ಬರೋಬ್ಬರಿ 70 ರೂ. ಹೆಚ್ಚಳ ಕಂಡಿದೆ.
24 ಕ್ಯಾರಟ್ (ಅಪರಂಜಿ) ಚಿನ್ನ: ಪ್ರತಿ ಗ್ರಾಮ್‌ಗೆ 14,000 ರೂ. ಗಡಿ ದಾಟಿದ್ದು, 10 ಗ್ರಾಮ್‌ಗೆ 1,39,250 ರೂ. ತಲುಪಿದೆ.
22 ಕ್ಯಾರಟ್ (ಆಭರಣ) ಚಿನ್ನ: ಪ್ರತಿ ಗ್ರಾಮ್‌ಗೆ 13,000 ರೂ. ಸಮೀಪವಿದ್ದು, 10 ಗ್ರಾಮ್‌ಗೆ 1,27,650 ರೂ. ಆಗಿದೆ.
ಬೆಳ್ಳಿ ಬೆಲೆ ವಿವರ:
ಬೆಳ್ಳಿಯ ದರವೂ ಸಹ ಗ್ರಾಹಕರಿಗೆ ಶಾಕ್ ನೀಡಿದ್ದು, ಪ್ರತಿ ಗ್ರಾಮ್‌ಗೆ 240 ರೂ. ಗಡಿ ಮುಟ್ಟಿದೆ.
ಬೆಂಗಳೂರಿನಲ್ಲಿ: 100 ಗ್ರಾಮ್ ಬೆಳ್ಳಿ ಬೆಲೆ 23,400 ರೂ. ತಲುಪಿದೆ.

