Friday, December 26, 2025

ನ್ಯೂ ಇಯರ್‌ ಬಂದೇ ಬಿಡ್ತು! ಈ 30 ಸೂಚನೆಗಳನ್ನು ಫಾಲೋ ಮಾಡ್ಲೇಬೇಕು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೊಸ ವರ್ಷಕ್ಕೆ ದಿನಗಳ ಕೌಂಟ್​ಡೌನ್​ ಶುರುವಾಗಿದೆ. ಈ ಹಿನ್ನೆಲೆ ಬೆಂಗಳೂರು ಪೊಲೀಸರು ಫುಲ್​ ಹೈ ಅಲರ್ಟ್ ಆಗಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಯಾವುದು ಅಹಿತಕರ ಘಟನೆಗಳು ನಡೆದಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳುತ್ತಿದ್ದಾರೆ.

ಈ ನಿಟ್ಟಿನಲ್ಲಿ ಬೆಂಗಳೂರು ನಗರ ಕಮಿಷನರ್​​​​​​ ಸೀಮಂತ್​ ಕುಮಾರ್​ ಸಿಂಗ್, ಬಾರ್ & ಪಬ್, ಕ್ಲಬ್, ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ನ್ಯೂ ಇಯರ್‌ಗೆ ಏನೆಲ್ಲಾ ಸಿದ್ಧತೆ ಇರಬೇಕು, ಯಾವ ರೀತಿ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಕಮಿಷನರ್ ಬಾರ್​, ರೆಸ್ಟೋರೆಂಟ್​ ಮತ್ತು ಪಬ್​ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ಸಭೆ ಬಳಿಕ ಬೆಂಗಳೂರು ನಗರ ಆಯುಕ್ತ ಸೀಮಂತ್​ ಕುಮಾರ್​ ಸಿಂಗ್​ ಮಾತನಾಡಿ, ಹೋಟೆಲ್, ಪಬ್, ಬಾರ್ ಮಾಲೀಕರ ಜೊತೆ ಸಭೆ ಮಾಡಿದ್ದೇವೆ, ಈಗಾಗಲೇ ಡಿವಿಷನ್, ಸ್ಟೇಷನ್ ಲೆವೆಲ್ ಮೀಟಿಂಗ್ ಆಗಿತ್ತು, ಈಗ ಎಲ್ಲರನ್ನೂ ಕರೆಸಿ ಸಭೆ ಮಾಡಿದ್ದೇನೆ. 30 ಸೂಚನೆಗಳನ್ನ ಕೊಟ್ಟಿದ್ದೇನೆ, ಕ್ರೌಡ್ ಕಂಟ್ರೋಲ್, ಏಜ್ ಲಿಮಿಟ್ಸ್, ಸಮಯ, ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ, ಶಬ್ದ ಮಾಲಿನ್ಯ, ಹೆಣ್ಮಕ್ಕಳ ಸೇಫ್ಟಿ ಸೇರಿ 30 ಸೂಚನೆಗಳನ್ನ ನೀಡಲಾಗಿದೆ. ಎಂಟ್ರಿ, ಎಕ್ಸಿಟ್ ಬಗ್ಗೆ, ಫೈರ್ ಸೇಫ್ಟಿ, ಪಾರ್ಕಿಂಗ್, ಎಮರ್ಜೆನ್ಸಿ ಕಾಂಟ್ಯಾಕ್ಟ್, ಹೀಗೆ ಎಲ್ಲದರ ಬಗ್ಗೆಯೂ ಸೂಚನೆ ನೀಡಲಾಗಿದೆ ಎಂದರು.

ಹೊಸ ವರ್ಷದ ಸಂಭ್ರಮಾಚರಣೆ ವೇಳೆ, ರೇವ್ ಪಾರ್ಟಿ, ಇಲ್ಲೀಗಲ್​ ಪಾರ್ಟಿ ಬಗ್ಗೆ ಡಿಸ್ಪ್ಲೇ ಮಾಡಬಾರದು, ಪಟಾಕಿಗಳು, ಆಯುಧಗಳು ಇರಬಾರದು, ಹೋಗಿ ಬರುವ ಜನರಿಗೆ ಸರದಿ ಸಾಲು ಇರಬೇಕು, ಸಂಭ್ರಮಾಚರಣೆ ವೇಳೆ ಪ್ರಚೋದನಕಾರಿ ಹಾಡುಗಳನ್ನ ಹಾಕಬಾರದು, ಕುಟುಂಬಸ್ಥರಿಗೆ, ಸ್ನೇಹಿತರಿಗೆ ಬೇರೆ ರೀತಿಯ ವ್ಯವಸ್ಥೆ ಇರಬೇಕು, ಲಿಕ್ಕರ್ ಸ್ಟಾಕ್ ಬಗ್ಗೆ ಮಾಹಿತಿ ಅಚ್ಚುಕಟ್ಟಾಗಿ ಇರಬೇಕು. ಕಾರ್ಯಕ್ರಮದ ಯೋಜನೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಮ್ಯಾನೇಜರ್, ಸಿಬ್ಬಂದಿ ಮದ್ಯಪಾನ‌ ಮಾಡಿರಬಾರದು ಹೀಗೆ ಹಲವು ಸೂಚನೆಗಳನ್ನ ನೀಡಿದ್ದಾರೆ.

ಬಾರ್​ ಮಾಲೀಕರು ಹೆಚ್ಚಿನ ಸಮಯ ಓಪನ್ ಮಾಡಲು ಮನವಿ ಮಾಡಿದ್ರು, ಆಗಲ್ಲ ಒಂದು ಗಂಟೆಗೆ ಎಲ್ಲಾ ಕ್ಲೋಸ್​ ಇರಬೇಕು ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಸೀಮಂತ್​ ಕುಮಾರ್​ ಸಿಂಗ್ ಖಡಕ್​ ಆಗಿ ಸೂಚಿಸಿದ್ದಾರೆ.  ಏನಾದ್ರು ಅಹಿತಕರ ಘಟನೆ ನಡೆದರೆ, ಗಲಾಟೆ ನಡೆದರೆ ಕೂಡಲೇ ನಮಗೆ ಗೊತ್ತಾಗಬೇಕು. ತಡವಾಗಿ ಗೊತ್ತಾದ್ರೆ ನಿಮ್ಮ ವಿರುದ್ಧವೇ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ದೇವೆ. ಹೆಚ್ಚು ಜನರಿಗೆ ಅವಕಾಶ ನೀಡಬಾರದು, ಕೆಪಾಸಿಟಿಗಿಂತಲೂ ಹೆಚ್ಚು ಜನರಿಗೆ ಅವಕಾಶ ಇಲ್ಲ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್​ ಹೇಳಿದ್ದಾರೆ.

error: Content is protected !!