ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ–ಲಕ್ನೋ ಹೆದ್ದಾರಿಯಲ್ಲಿ ಹಗಲು ಹೊತ್ತಲ್ಲೇ ನಡೆದ ದರೋಡೆ ಪ್ರಕರಣ ಸಂಚಲನ ಮೂಡಿಸಿದೆ. ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಬಳಿ ಇದ್ದ ಸುಮಾರು 85 ಲಕ್ಷ ರೂಪಾಯಿ ನಗದನ್ನು ಬೈಕ್‌ನಲ್ಲಿ ಬಂದ ದರೋಡೆಕೋರರು ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಸಂಪೂರ್ಣ ಘಟನೆ ಹೆದ್ದಾರಿಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ, ನೋಯ್ಡಾ ಮೂಲದ ಉದ್ಯಮಿಯೊಬ್ಬರ ಬಳಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಣದ ಚೀಲವನ್ನು ಸ್ಕೂಟರ್‌ನಲ್ಲಿ ಇಟ್ಟುಕೊಂಡು ಸಾಗುತ್ತಿದ್ದರು. ಆತನ ಚಲನವಲನಗಳ ಬಗ್ಗೆ ಪೂರ್ವ ಮಾಹಿತಿ ಪಡೆದಿದ್ದ ದರೋಡೆಕೋರರು ಹೆದ್ದಾರಿಯಲ್ಲಿ ಆತನನ್ನು ಅಡ್ಡಗಟ್ಟಿ, ಬೆದರಿಕೆ ಹಾಕಿ ನಗದು ತುಂಬಿದ್ದ ಚೀಲವನ್ನು ಕಿತ್ತುಕೊಂಡಿದ್ದಾರೆ.
ಇದನ್ನೂ ಓದಿ:
ಕ್ಷಣಗಳಲ್ಲಿ ನಡೆದ ಈ ಘಟನೆ ಬಳಿಕ ಆರೋಪಿಗಳು ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿಗಳ ಗುರುತು ಪತ್ತೆಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಹಣ ಸಾಗಣೆ ಕುರಿತ ಮಾಹಿತಿಯು ದರೋಡೆಕೋರರಿಗೆ ಹೇಗೆ ಲಭ್ಯವಾಯಿತು ಎಂಬುದರ ಬಗ್ಗೆ ಕೂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

