ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ್ ಹಜಾರೆ ಟ್ರೋಫಿಯ ದೆಹಲಿ–ಗುಜರಾತ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಕ್ಷಣಗಳನ್ನು ನೀಡಿತ್ತು. ದೆಹಲಿ ಪರ ಕಣಕ್ಕಿಳಿದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಕ್ಲಾಸ್ ಪ್ರದರ್ಶಿಸಿ ತಂಡದ ಗೆಲುವಿಗೆ ಬಲ ನೀಡಿದರು. 61 ಎಸೆತಗಳಲ್ಲಿ 77 ರನ್‌ಗಳ ಆಕರ್ಷಕ ಇನ್ನಿಂಗ್ಸ್ ಆಡಿದ ಕೊಹ್ಲಿ, ಶತಕದತ್ತ ದಿಟ್ಟ ಹೆಜ್ಜೆ ಇಡುತ್ತಿದ್ದಾಗ ಗುಜರಾತ್ ಯುವ ಸ್ಪಿನ್ನರ್ ವಿಶಾಲ್ ಜೈಸ್ವಾಲ್ ಅವರ ಎಸೆತಕ್ಕೆ ಬಲಿಯಾದರು.
ಬಿಗ್ ಶಾಟ್ ಪ್ರಯತ್ನದಲ್ಲಿ ಕ್ರೀಸ್ ಬಿಟ್ಟ ಕೊಹ್ಲಿಯನ್ನು ಜೈಸ್ವಾಲ್ ಸ್ಟಂಪ್ ಔಟ್ ಮಾಡಿದರು. ಮಹತ್ವದ ವಿಕೆಟ್ ಪಡೆದ ಸಂತಸದಲ್ಲಿ ಜೈಸ್ವಾಲ್ ಸಂಭ್ರಮಿಸಿದರು. ಆದರೆ ಪಂದ್ಯ ಮುಗಿದ ಬಳಿಕ ಕಂಡ ದೃಶ್ಯ ಕ್ರೀಡಾಸ್ಫೂರ್ತಿಗೆ ಮತ್ತಷ್ಟು ಮೆರುಗು ನೀಡಿತು. ಕೊಹ್ಲಿ ಸ್ವತಃ ಜೈಸ್ವಾಲ್ ಅವರನ್ನು ಭೇಟಿಯಾಗಿ, ತಮ್ಮ ವಿಕೆಟ್ ಪಡೆದ ಚೆಂಡಿನ ಮೇಲೆ ಆಟೋಗ್ರಾಫ್ ನೀಡಿ ವಿಶೇಷ ಗೌರವ ಸಲ್ಲಿಸಿದರು. ಆ ಕ್ಷಣದ ಫೋಟೋವನ್ನು ಜೈಸ್ವಾಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ಇದನ್ನೂ ಓದಿ:
ಪೋಸ್ಟ್‌ನಲ್ಲಿ ಜೈಸ್ವಾಲ್, ಕೊಹ್ಲಿಯಂತಹ ದಿಗ್ಗಜರೊಂದಿಗೆ ಒಂದೇ ಮೈದಾನದಲ್ಲಿ ಆಡಿದ ಅನುಭವ ಮತ್ತು ಅವರ ವಿಕೆಟ್ ಪಡೆದ ಕ್ಷಣ ಜೀವನಪೂರ್ತಿ ನೆನಪಿನಲ್ಲಿರುತ್ತೆ ಎಂದು ಬರೆದುಕೊಂಡಿದ್ದಾರೆ. ಈ ಪಂದ್ಯದಲ್ಲಿ ಜೈಸ್ವಾಲ್ 10 ಓವರ್‌ಗಳಲ್ಲಿ 42 ರನ್ ನೀಡಿ ನಾಲ್ಕು ವಿಕೆಟ್ ಪಡೆದರೂ, ಗುಜರಾತ್ ತಂಡ ಏಳು ರನ್‌ಗಳಿಂದ ಸೋಲು ಕಂಡಿತು.

