Sunday, December 28, 2025

Rice series 70 | ಸಂಡೇ ಸ್ಪೆಷಲ್! ಫಟಾಫಟ್ ಅಂತ ರೆಡಿ ಆಗುತ್ತೆ ನೋಡಿ ಈ ಆಲೂ ರೈಸ್

ಬೆಳಗಿನ ಓಡಾಟದ ನಡುವೆ “ಇಂದು ಏನ್ ತಿಂಡಿ ಮಾಡೋದು?” ಎಂಬ ಪ್ರಶ್ನೆಗೆ ಸರಳ ಉತ್ತರವೇ ಆಲೂ ರೈಸ್. ಹೆಚ್ಚು ಮಸಾಲೆ ಇಲ್ಲದೆ, ಹಗುರವಾಗಿಯೇ ಹೊಟ್ಟೆ ತೃಪ್ತಿ ನೀಡುವ ಈ ಅನ್ನ ಬೆಳಗಿನ ತಿಂಡಿಗೆ ತುಂಬಾ ಸೂಕ್ತ.

ಬೇಕಾಗುವ ಪದಾರ್ಥಗಳು:

ಅಕ್ಕಿ – 1 ಕಪ್
ಆಲೂಗಡ್ಡೆ – 2 (ಚಿಕ್ಕ ಚಿಕ್ಕ ತುಂಡುಗಳು)
ಈರುಳ್ಳಿ – 1 (ಸಣ್ಣದು)
ಹಸಿಮೆಣಸು – 1–2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಬೇ ಎಲೆ – 1
ಅರಿಶಿನ ಪುಡಿ – ½ ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಗರಂ ಮಸಾಲಾ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ ಅಥವಾ ತುಪ್ಪ – 2 ಟೇಬಲ್ ಸ್ಪೂನ್
ನೀರು – 2 ಕಪ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ:

ಮೊದಲು ಅಕ್ಕಿಯನ್ನು ತೊಳೆದು 15 ನಿಮಿಷ ನೆನೆಸಿಡಿ. ಕುಕ್ಕರ್‌ನಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ ಜೀರಿಗೆ ಮತ್ತು ಬೇ ಎಲೆ ಹಾಕಿ. ನಂತರ ಈರುಳ್ಳಿ, ಹಸಿಮೆಣಸು ಸೇರಿಸಿ ಗೋಲ್ಡನ್ ಬಣ್ಣ ಬರುವವರೆಗೂ ಹುರಿಯಿರಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಕಲಸಿ. ಈಗ ಆಲೂಗಡ್ಡೆ ತುಂಡುಗಳನ್ನು ಸೇರಿಸಿ ಸ್ವಲ್ಪ ಹುರಿಯಿರಿ. ಅರಿಶಿನ, ಕೆಂಪು ಮೆಣಸು, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ನೆನೆಸಿದ ಅಕ್ಕಿ ಮತ್ತು ನೀರು ಸೇರಿಸಿ ಕುಕ್ಕರ್ ಮುಚ್ಚಿ 2–3 ಸೀಟಿ ಬರುವವರೆಗೆ ಬೇಯಿಸಿ. ತಣ್ಣಗಾದ ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿ ಬಿಸಿ ಆಲೂ ರೈಸ್ ಸರ್ವ್ ಮಾಡಿ. ಈ ಆಲೂ ರೈಸ್‌ನ್ನು ರೈತಾ ಅಥವಾ ಮೊಸರಿನ ಜೊತೆಗೆ ತಿಂದರೆ ಇನ್ನಷ್ಟು ರುಚಿಯಾಗಿರುತ್ತದೆ.

error: Content is protected !!