ದಿನನಿತ್ಯದ ಉಪಹಾರದಲ್ಲಿ ಸ್ವಲ್ಪ ಹೊಸ ರುಚಿ ಬೇಕೆನಿಸಿದಾಗ ಅಮಟೆಕಾಯಿ ಚಿತ್ರಾನ್ನ ಟ್ರೈ ಮಾಡಬಹುದು. ಮಾವಿನಕಾಯಿ ರುಚಿಯಂತಿರುವ ಅಮಟೆಕಾಯಿಯ ಸ್ವಲ್ಪ ಹುಳಿ–ಸಿಹಿ ರುಚಿ ಚಿತ್ರಾನ್ನದೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ.
ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಅನ್ನ – 2 ಕಪ್
ಅಮಟೆಕಾಯಿ – 1 ಕಪ್ (ತುರಿದದ್ದು)
ಎಣ್ಣೆ – 2 ಟೇಬಲ್ ಸ್ಪೂನ್
ಸಾಸಿವೆ – 1 ಟೀ ಸ್ಪೂನ್
ಉದ್ದಿನ ಬೇಳೆ – 1 ಟೀ ಸ್ಪೂನ್
ಕಡಲೆಬೇಳೆ – 1 ಟೀ ಸ್ಪೂನ್
ಒಣಮೆಣಸು – 2
ಹಸಿಮೆಣಸು – 2
ಕರಿಬೇವು – ಸ್ವಲ್ಪ
ಅರಿಶಿನ ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬೆಲ್ಲ – ಸ್ವಲ್ಪ (ಐಚ್ಛಿಕ)
ನಿಂಬೆಹಣ್ಣು ರಸ – ಸ್ವಲ್ಪ
ಮಾಡುವ ವಿಧಾನ:
ಮೊದಲು ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ. ನಂತರ ಉದ್ದಿನ ಬೇಳೆ, ಕಡಲೆಬೇಳೆ ಸೇರಿಸಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಒಣಮೆಣಸು, ಹಸಿಮೆಣಸು, ಕರಿಬೇವು ಹಾಕಿ ಒಂದು ನಿಮಿಷ ಕಲಸಿ. ಈಗ ಅಮಟೆಕಾಯಿ ಸೇರಿಸಿ ಅರಿಶಿನ ಪುಡಿ ಹಾಗೂ ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ.
ಅಮಟೆಕಾಯಿ ಮೃದುವಾದ ಮೇಲೆ ಸ್ವಲ್ಪ ಬೆಲ್ಲ ಹಾಕಿ ಮಿಶ್ರಣ ಮಾಡಿ. ನಂತರ ಬೇಯಿಸಿದ ಅನ್ನವನ್ನು ಸೇರಿಸಿ ನಿಧಾನವಾಗಿ ಕಲಸಿ. ಕೊನೆಗೆ ನಿಂಬೆಹಣ್ಣು ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಯಾದ ಅಮಟೆಕಾಯಿ ಚಿತ್ರಾನ್ನ ಸಿದ್ಧ!

