ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಬ್ಬದ ಸೀಸನ್‌ನಲ್ಲಿ ಬಿಡುಗಡೆಯಾದ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಡಿಸೆಂಬರ್ 25ರಂದು ತೆರೆಕಂಡ ಈ ಚಿತ್ರ ಮೊದಲ ದಿನವೇ ಗಮನ ಸೆಳೆದಿದ್ದು, ನಾಲ್ಕು ದಿನಗಳಲ್ಲಿ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಕ್ರಿಸ್‌ಮಸ್ ವೀಕೆಂಡ್‌ನ ದೊಡ್ಡ ಸ್ಟಾರ್ ಆಗಿ ಹೊರಹೊಮ್ಮಿದೆ ಎಂದು ಚಿತ್ರತಂಡ ತಿಳಿಸಿದೆ.
‘ಮಾರ್ಕ್’ ಸಿನಿಮಾವನ್ನು ಕುರಿತು ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಕಡಿಮೆ ಅವಧಿಯಲ್ಲಿ ಸುದೀಪ್ ಚಿತ್ರವನ್ನು ಪೂರ್ಣಗೊಳಿಸಿದ್ದರೂ, ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೆಚ್ಚುಗೆ ಪಡೆಯುತ್ತಿದೆ. ರಾಜ್ಯದ ಎಲ್ಲ ಭಾಗಗಳಿಂದಲೂ ಉತ್ತಮ ಆದಾಯ ಬರುತ್ತಿದ್ದು, ಚಿತ್ರತಂಡ ಇದನ್ನು ‘ಕ್ರಿಸ್‌ಮಸ್ ಬ್ಲಾಕ್‌ಬಸ್ಟರ್’ ಎಂದು ಘೋಷಿಸಿದೆ. ಮೊದಲ ನಾಲ್ಕು ದಿನಗಳಲ್ಲಿ ಇಷ್ಟು ದೊಡ್ಡ ಮೊತ್ತ ಸಂಗ್ರಹವಾದುದು ತಂಡದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.
ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಸಾಲು ಸಾಲು ರಜೆಗಳು ದೊರೆತಿದ್ದು, ಸಿನಿಮಾಗೆ ಪ್ಲಸ್ ಆಗಿದೆ. ಅನೇಕ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳಲ್ಲಿ ರಜೆ ಇರುವ ಕಾರಣ ಶನಿವಾರ, ಭಾನುವಾರ ಮಾತ್ರವಲ್ಲದೆ ಸೋಮವಾರವೂ ಉತ್ತಮ ಬುಕಿಂಗ್ ಕಂಡುಬಂದಿದೆ.

