Monday, December 29, 2025

33 ವರ್ಷಗಳ ಸಿನಿ ಪಯಣಕ್ಕೆ ಗುಡ್ ಬೈ: ಮಲೇಷ್ಯಾದಲ್ಲಿ ದಾಖಲೆ ಸೃಷ್ಟಿಸಿದ ದಳಪತಿ ವಿಜಯ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಲೇಷ್ಯಾದಲ್ಲಿ ಡಿಸೆಂಬರ್‌ 27ರಂದು ನಡೆದ ದಳಪತಿ ವಿಜಯ್‌ ಅವರ ಕೊನೆಯ ಸಿನಿಮಾದ ‘ಜನನಾಯಗನ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವು ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಿದೆ.

ಮಲೇಷ್ಯಾದಲ್ಲಿ ಅತಿ ಹೆಚ್ಚು ಜನರು ಭಾಗವಹಿಸಿದ ಆಡಿಯೋ ಬಿಡುಗಡೆ ಸಮಾರಂಭ ಎಂಬ ಹೆಗ್ಗಳಿಕೆಯೊಂದಿಗೆ ಅಧಿಕೃತವಾಗಿ ‘ಮಲೇಷಿಯನ್ ಬುಕ್ ಆಫ್ ರೆಕಾರ್ಡ್ಸ್’ಗೆ ಸೇರ್ಪಡೆಯಾಗಿದೆ.

51 ವರ್ಷ ವಯಸ್ಸಿನ ಸ್ಟಾರ್​ ನಟ ದಳಪತಿ ವಿಜಯ್‌ 33 ವರ್ಷಗಳ ಸಿನಿ ಪಯಣಕ್ಕೆ ಈ ವೇಳೆ ವಿದಾಯ ಹೇಳಿದ್ದಾರೆ. ತಮ್ಮ ಕೊನೆಯ ಸಿನಿಮಾ ‘ಜನ ನಾಯಗನ್’‌ ಆಡಿಯೋ ಲಾಂಚ್‌ ಕಾರ್ಯಕ್ರಮ ಮಲೇಷ್ಯಾದ ಬುಕಿಟ್‌ ಜಲಿಲ್‌ ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆಸಿದ ಬೆನ್ನಲ್ಲೇ ಅವರು ಚಿತ್ರರಂಗದಿಂದ ನಿವೃತ್ತರಾಗುವ ಬಗ್ಗೆ ಘೋಷಿಸಿದರು.

‘ತಲಪತಿ ತಿರುವಿಳಾ’ ಎಂದು ಹೆಸರಿನ ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಕೂಡಿದ್ದರು. ವಿಶೇಷ ಎಂದರೆ, ಮಲೇಷ್ಯಾದಲ್ಲಿ ನಡೆದ ಇಲ್ಲಿಯವರೆಗಿನ ಕಾರ್ಯಕ್ರಮದ ರಿಕಾರ್ಡ್​ ಇದಂತೆ.

ವಿಜಯ್ ಅವರು ವೇದಿಕೆಯ ಮೇಲೆ ಓಡಿಹೋಗಿ ತಮ್ಮ ತಂದೆಯನ್ನು ಆಲಂಗಿಸಿಕೊಂಡ ಕ್ಷಣವು ಇಡೀ ಕ್ರೀಡಾಂಗಣದಲ್ಲಿ ಚಪ್ಪಾಳೆ ಮತ್ತು ಹರ್ಷೋದ್ಗಾರಗಳನ್ನು ಮೊಳಗಿಸಿತು.

ಜನ ನಾಯಗನ್‌ ಸಿನಿಮಾವು ಜನವರಿ 9ರಂದು ಬಿಡುಗಡೆ ಆಗುತ್ತಿದೆ. ಕನ್ನಡದ ಕೆವಿಎನ್‌ ಪ್ರೊಡಕ್ಷನ್ಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.

error: Content is protected !!