ಹೊಸದಿಗಂತ ವರದಿ ಮಂಗಳೂರು:
ಒಂದು ಕಡೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರವು ಕಾನೂನಿನ ಹೆಸರಿನಲ್ಲಿ ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲು ಸಂಚು ರೂಪಿಸುತ್ತಿದ್ದರೆ, ಇನ್ನೊಂದೆಡೆ ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದೆ. ಈ ಎರಡೂ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಹಿಂದೂ ಜನಜಾಗ್ರತಿ ಸಮಿತಿ ರಾಜ್ಯದ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರಗಳು ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದೆ.
ಹಿಂದೂ ಸಂಘಟನೆಗಳನ್ನು ದಮನಿಸಲು ಸರ್ಕಾರದ ಕುತಂತ್ರ:
ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕಬಾರದು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರವು ಹಿಂದುಗಳ ಧ್ವನಿಯನ್ನು ಹತ್ತಿಕ್ಕಲು ತರಾತುರಿಯಲ್ಲಿ ಅಂಗೀಕರಿಸಿರುವ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಕಾಯಿದೆ-2025’ ಕೇವಲ ಹಿಂದೂ ಸಂಘಟನೆಗಳನ್ನು ದಮನಿಸುವ ಷಡ್ಯಂತ್ರವಾಗಿದೆ ಎಂದು ಸಮಿತಿ ಕಿಡಿಕಾರಿದೆ.
ಕಾಯಿದೆಯಿಂದ ಸಮಸ್ಯೆ ಏನಿದೆ?
ಸತ್ಯ ಹೇಳಿದರೂ ಜೈಲು: ಈ ಕಾಯಿದೆಯಲ್ಲಿ ಸತ್ಯ ಸಂಗತಿಗಳನ್ನು ಹೇಳುವುದು ರಕ್ಷಣೆಯಲ್ಲ. ಲವ್ ಜಿಹಾದ್, ಮತಾಂತರದಂತಹ ಸತ್ಯಗಳನ್ನು ಬಿಚ್ಚಿಟ್ಟರೆ ‘ಭಾವನೆಗೆ ಧಕ್ಕೆ’ ಎಂಬ ನೆಪದಲ್ಲಿ ಹಿಂದೂಗಳನ್ನು ಜೈಲಿಗಟ್ಟುವ ಸಂಚು ಇದರಲ್ಲಿದೆ.
ಜಾಮೀನು ರಹಿತ ದೌರ್ಜನ್ಯ: ಅಸ್ಪಷ್ಟ ವ್ಯಾಖ್ಯಾನಗಳ ಮೂಲಕ ಹಿಂದೂ ನಾಯಕರು, ಸಂತರು ಮತ್ತು ಸಾಮಾಜಿಕ ಜಾಲತಾಣದ ಕಾರ್ಯಕರ್ತರನ್ನು ಗುರಿಯಾಗಿಸಿ ಜಾಮೀನು ರಹಿತ ಬಂಧನ ಮಾಡುವ ಪಿತೂರಿ ಇದಾಗಿದೆ.
ಧರ್ಮ ದಮನ: ಗೋಹತ್ಯೆ ತಡೆ ಅಥವಾ ಧರ್ಮ ಜಾಗೃತಿಯ ಸಂದೇಶಗಳನ್ನೂ ‘ದ್ವೇಷ’ ಎಂದು ಬಿಂಬಿಸಿ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ಈ ಕರಾಳ ಕಾಯಿದೆಗೆ ಮಾನ್ಯ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಸಮಿತಿ ಆಗ್ರಹಿಸಿದೆ.
ಬಾಂಗ್ಲಾದೇಶದ ಮೈಮನ್‌ಸಿಂಗ್‌ನಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆಯನ್ನು ಸಮಿತಿಯು ತೀವ್ರವಾಗಿ ಖಂಡಿಸಿದೆ. 1941 ರಲ್ಲಿ 28% ಇದ್ದ ಹಿಂದೂ ಜನಸಂಖ್ಯೆ ಇಂದು 7.8‘ದ್ವೇಷ ಭಾಷಣ ತಡೆ ಕಾಯಿದೆ’% ಕ್ಕೆ ಕುಸಿದಿರುವುದು ವ್ಯವಸ್ಥಿತ ಹಿಂದೂ ನಿರ್ಮೂಲನೆಯ ಸಂಕೇತವಾಗಿದೆ ಎಂದು ಸಮಿತಿ ಹೇಳಿದೆ.
ಅಸಂವಿಧಾನಿಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆ ಕಾಯ್ದೆಗೆ ಅನುಮತಿ ನೀಡಬಾರದು ಹಾಗೂ ಬಾಂಗ್ಲಾ ಹಿಂದೂ ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಲು ಭಾರತ ಸರಕಾರ ದಿಂದ ಕಠಿಣ ರಾಜಕೀಯ ಹಸ್ತಕ್ಷೇಪ ಹಾಗೂ ಅಂತಾರಾಷ್ಟ್ರೀಯ ಒತ್ತಡ ಹೇರುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ರಾಜು ಕೆ ಮೂಲಕ ರಾಜ್ಯಪಾಲರಿಗೆ ಮತ್ತು ಪ್ರಧಾನಿಯವರಿಗೆ ಮನವಿಯನ್ನು ನೀಡಲಾಯಿತು.
ಹಿಂದೂ ಸಮಾಜದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿರುವ ಈ ಎರಡು ಗಂಭೀರ ವಿಚಾರಗಳಲ್ಲಿ ಸರ್ಕಾರಗಳು ವಿಫಲವಾದರೆ ಹಿಂದೂ ಸಮಾಜವು ಬೀದಿಗೆ ಇಳಿದು ಹೋರಾಟ ಮಾಡಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯು ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ದಿನಕರ್ ಬಜಾಲ್, ಜೆ.ಸುರೇಂದ್ರ, ಹಿಂದೂ ರಾಷ್ಟ್ರ ಸೇವಾ ಸಮಿತಿಯ ಯೋಗೀಶ್ ರೈ. ಹರೀಶ್ ಶೆಟ್ಟಿ, ಸುರೇಶ್ ಬಂಗೇರ್ ,ರಾಮಪ್ರಸಾದ್ ಶೆಟ್ಟಿ, ನವೀನ್ ಸುವರ್ಣ , ನ್ಯಾಯವಾದಿಗಳಾದ ಸುಮಂಗಲಾ. ಜಲಜಾಕ್ಷಿ , ಜ್ಯೋತಿ. ವಿದ್ಯಾ, ತಿರ್ಥೇಶ ಗೌಡ, ಗಣೇಶ.
ಹಿಂದೂತ್ವವಾದಿಗಳಾದ ಜಯಪ್ರಕಾಶ ಭಾಸ್ಕರ ಆಚಾರ್ಯ, ಲಕ್ಷ್ಮೀಕಾಂತ, ರಾಜೇಂದ್ರ ಪೇಜಾವರ,ಅಶೋಕ ಆಚಾರ್ಯ , ಬಿಕರ್ನಕಟ್ಟೆ , ಶ್ರೀಪತಿ ಕದ್ರಿ, ಸತೀಶ್ ಉರ್ವ, ಹಿಂದೂ ಜನಜಾಗೃತಿ ಸಮಿತಿಯ ಯೋಗೀಶ ಅಶ್ವಥ ಪುರ, ರೋಹಿತ್‌ಅಡ್ಯಾರ್ , ಗಣೇಶ ಸಾಲಿಯಾನ, ಉಪೇಂದ್ರ ಆಚಾರ್ಯ ಇವರು ಉಪಸ್ಥಿತಿತರಿದ್ದರು.

