ಸಾಮಾಗ್ರಿಗಳು
ಒಗರಣೆಗೆ ಎಣ್ಣೇ ಸಾಸಿವೆ ಜೀರಿಗೆ
ಈರುಳ್ಳಿ
ಟೊಮ್ಯಾಟೊ
ಹಾಗಲಕಾಯಿ
ಆಲೂಗಡ್ಡೆ
ಕ್ಯಾಪ್ಸಿಕಂ
ಮೂಲಂಗಿ
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಮ್ಯಾಗಿ ಮಸಾಲಾ
ಕಾಯಿ ತುರಿ
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ಜತೆಗೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಹಾಗಲಕಾಯಿ ಹಾಗೂ ಉಪ್ಪು ಹಾಕಿ ಸ್ವಲ್ಪ ಸಮಯ ಬಾಡಿಸಿ
ನಂತರ ಇದಕ್ಕೆ ಕ್ಯಾಪ್ಸಿಕಂ, ಆಲೂಗಡ್ಡೆ, ಮೂಲಂಗಿ ಹಾಕಿ ಬೇಯಿಸಿ
ನಂತರ ಟೊಮ್ಯಾಟೊ ಹಾಕಿ
ಖಾರದಪುಡಿ, ಸಾಂಬಾರ್ ಪುಡಿ, ಗರಂ ಮಸಾಲಾ ಹಾಗೂ ಮ್ಯಾಗಿ ಮಸಾಲಾ ಹಾಕಿ
ನಂತರ ಸ್ವಲ್ಪ ನೀರು ಹಾಕಿ, ಕಡೆಗೆ ರುಚಿ ನೋಡಿದ ನಂತರ ಕಾಯಿತುರಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ರೊಟ್ಟಿ ಅಥವಾ ಚಪಾತಿ ಜೊತೆ ತಿನ್ನಿ

