Tuesday, December 30, 2025

ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ನಿಗೂಢ ಬಲೂನ್ ಪತ್ತೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನಲ್ಲಿ ಪಾಕಿಸ್ತಾನಿ ಗುರುತುಗಳನ್ನು ಹೊಂದಿರುವ ಅನುಮಾನಾಸ್ಪದ ಬಲೂನ್ ಪತ್ತೆಯಾಗಿದೆ.

ಆ ಬಲೂನ್ ವಿಮಾನವನ್ನು ಹೋಲುತ್ತಿದೆ. ಅದರ ಮೇಲೆ ಪಾಕಿಸ್ತಾನಿ ಧ್ವಜದ ಗುರುತು ಮತ್ತು PIA (ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ) ಎಂದು ಬರೆಯಲಾಗಿದೆ. ಅದರ ಮೇಲೆ PIA ಎಂಬ ಪದವನ್ನು ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಬರೆದಿರುವುದು ಕಂಡು ಬಂದಿದೆ . ಭಾರತೀಯ ಸೇನೆಯು ಬಲೂನ್ ವಶಪಡಿಸಿಕೊಂಡಿದೆ.

ಮೂಲಗಳ ಪ್ರಕಾರ, ಪಾಕಿಸ್ತಾನಿ ಬಲೂನ್ ಅಖ್ನೂರ್‌ನ ಪ್ರಾಗ್ವಾಲ್ ಪ್ರದೇಶದಲ್ಲಿ ಪತ್ತೆಯಾಗಿದೆ. ಬಲೂನ್ ಈ ಪ್ರದೇಶಕ್ಕೆ ಯಾವಾಗ ಬಂದಿತು ಎಂಬುದರ ಕುರಿತು ಸೇನೆ ತನಿಖೆ ಆರಂಭಿಸಿದೆ.

error: Content is protected !!