Tuesday, December 30, 2025

ರಷ್ಯಾ ಅಧ್ಯಕ್ಷ ಪುಟಿನ್ ನಿವಾಸದ ಮೇಲೆ ದಾಳಿಗೆ ಉಕ್ರೇನ್ ಯತ್ನ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್ ರಷ್ಯಾದ ನವ್ಗೊರೊಡ್ ಪ್ರದೇಶದಲ್ಲಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಸೋಮವಾರ ಹೇಳಿಕೊಂಡಿದ್ದಾರೆ.

ಆ ಸಮಯದಲ್ಲಿ ಪುಟಿನ್ ನಿವಾಸದಲ್ಲಿದ್ದರೋ ಇಲ್ಲವೋ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ರಾಜ್ಯ ಭಯೋತ್ಪಾದನೆಯ ಕೃತ್ಯ ಎಂದು ಕರೆದ ರಷ್ಯಾದ ನಾಯಕ, 91 ಡ್ರೋನ್‌ ಗಳ ಮೂಲಕ ದಾಳಿ ನಡೆಸಿದೆ ಎಂದು ಹೇಳಿಕೊಂಡಿದ್ದಾರೆ.

‘ನವ್ಗೊರೊಡ್ ಪ್ರದೇಶದಲ್ಲಿ ರಷ್ಯಾದ ಅಧ್ಯಕ್ಷರ ನಿವಾಸದ ಮೇಲೆ ದಾಳಿ ಮಾಡಿದ ಎಲ್ಲಾ ಡ್ರೋನ್’ಗಳನ್ನು ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಗಳು ನಾಶಪಡಿಸಿವೆ’ ಎಂದು ಲಾವ್ರೊವ್ ಹೇಳಿದ್ದಾರೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.

ಆಪಾದಿತ ಘಟನೆಯು ಕೈವ್ ಜೊತೆಗಿನ ಯಾವುದೇ ಭವಿಷ್ಯದ ಮಾತುಕತೆಗಳಲ್ಲಿ ಮಾಸ್ಕೋದ ನಿಲುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಲಾವ್ರೊವ್ ಹೇಳಿದ್ದಾರೆ ಎಂದು ಇಂಟರ್‌ಫ್ಯಾಕ್ಸ್ ಉಲ್ಲೇಖಿಸಿ ವರದಿಯಾಗಿದೆ..

error: Content is protected !!