ಮೇಷ.
ಸಾಧನೆಯ ದಿನ. ಕೆಲಸದಲ್ಲಿ ಪರಿಪೂರ್ಣತೆ. ಒತ್ತಡ ನಿವಾರಣೆ. ಯೋಚಿಸಿದ ಕಾರ್ಯದಲ್ಲಿ ಸಫಲತೆ. ಕೌಟುಂಬಿಕ ಇಷ್ಟಾರ್ಥ ಪೂರೈಸಲಿದೆ.
ವೃಷಭ
ಸಂತೋಷದ ದಿನ. ಖಾಸಗಿ ಬದುಕಿನಲ್ಲಿ ಪ್ರೀತಿ, ಸಾಮರಸ್ಯ. ವೃತ್ತಿ ವ್ಯವಹಾರ ಸುಲಲಿತ. ಆಪ್ತರಿಗೆ ಸಾಲ ಕೊಡಲು ಹೋಗಬೇಡಿ.
ಮಿಥುನ
ನಿರಾಳ ಮನಸ್ಸು. ಹೊಸ ಯೋಜನೆಗೆ ಕೈಹಚ್ಚಲು ಕಾಲ ಸೂಕ್ತ. ಕೆಲಸದಲ್ಲಿ ಬಡ್ತಿ ಸಂಭವ. ಹಣದ ವಿಚಾರದಲ್ಲಿ ಪೂರಕ ಬೆಳವಣಿಗೆ.
ಕಟಕ
ಸಂಬಂಧದ ವಿಷಯದಲ್ಲಿ ನಿಮ್ಮ ತಾಳ್ಮೆ ಪರೀಕ್ಷಿಸುವ ಬೆಳವಣಿಗೆ. ಲಘ ವಿಷಯವನ್ನೂ ಗಂಭೀರವಾಗಿ ಪರಿಗಣಿಸಿ ಸಂಘರ್ಷ ಉಂಟಾದೀತು.
ಸಿಂಹ
ಗುಣಾತ್ಮಕ ಬೆಳವಣಿಗೆಯ ದಿನ. ಖಾಸಗಿ ಬದುಕಲ್ಲಿ ನೀವು ಇಚ್ಛಿಸಿದ ಕಾರ್ಯ ಸಿದ್ಧಿ. ವೃತ್ತಿಯಲ್ಲೂ ಸಫಲತೆ. ವಿದ್ಯಾರ್ಥಿಗಳಿಗೆ ಯಶ.
ಕನ್ಯಾ
ಇತರರ ಜತೆ ವ್ಯವಹರಿಸುವಲ್ಲಿ ಸಫಲತೆ ಕಾಣುವಿರಿ. ಕೌಟುಂಬಿಕ ಸಂಬಂಧ ಕೆಡದಂತೆ ನೋಡಿಕೊಳ್ಳಿ. ಲಘು ಅನಾರೋಗ್ಯ ಸಂಭವ.
ತುಲಾ
ವೈಯಕ್ತಿಕ ಗುರಿ ಸಾಽಸಲು ಹೆಚ್ಚು ಶ್ರಮ ಹಾಕುವಿರಿ. ಸ್ವಲ್ಪ ಮಟ್ಟಿನ ಹತಾಶೆ, ಅಸಹನೆ ಉಂಟಾದೀತು. ಹಣದ ಕೊರತೆ ಕಾಡಬಹುದು.
ವೃಶ್ಚಿಕ
ಕ್ಲಿಷ್ಟಕರ ಪರಿಸ್ಥಿತಿ ಉದ್ಭವಿಸಿದರೂ ಬಳಿಕ ಶಮನವಾಗಲಿದೆ. ಕೆಲಸದಲ್ಲಿ ನಿಮ್ಮ ಕೌಶಲ್ಯ ಅನಾವರಣ. ಶ್ಲಾಘನೆ ಪಡೆಯುವಿರಿ. ಪ್ರೀತಿಯಲ್ಲಿ ಯಶಸ್ಸು.
ಧನು
ಕೆಲಸದ ಪ್ರಗತಿ ಬಗ್ಗೆ ಕೆಲವು ಚಿಂತೆ ಕಾಡುವುದು. ಬೆಂಬಲದ ಕೊರತೆ. ಅನ್ಯರ ಮೇಲಿನ ದ್ವೇಷ ಬಿಡಿ, ಸಹಕಾರಕ್ಕೆ ಮನ ಮಾಡಿ. ಕೌಟುಂಬಿಕ ಉದ್ವಿಗ್ನತೆ.
ಮಕರ
ದಿನವಿಡೀ ಕೆಲಸದ ಒತ್ತಡ. ಸಣ್ಣ ವಿಷಯಕ್ಕೂ ಹೆಚ್ಚು ಗಮನ ಕೊಡಿ. ಸಣ್ಣ ಲೋಪ ಗಂಭೀರ ಪರಿಣಾಮ ಬೀರೀತು. ಕೌಟುಂಬಿಕ ಒತ್ತಡ.
ಕುಂಭ
ಕೆಲಸ ಸುಗಮವಾಗಿ ಸಾಗದು. ಅಡ್ಡಿಗಳು, ಮಾನಸಿಕ ಒತ್ತಡ, ಅಸಹನೆ ಕಾಡುವುದು. ಹಣದ ವಿಷಯದಲ್ಲಿ ಪ್ರಮುಖ ನಿರ್ಧಾರ ತಾಳದಿರಿ.
ಮೀನ
ಖಾಸಗಿ ಬದುಕಲ್ಲಿ ಒತ್ತಡ ನಿವಾರಣೆ. ಯಾವುದೇ ಸಮಸ್ಯೆ ತಾತ್ಕಾಲಿಕ ಎಂಬುದು ಅರಿವಿರಲಿ. ಮುಖದಲ್ಲಿ ಸದಾ ನಗುವಿರಲಿ.
ದಿನಭವಿಷ್ಯ: ವಿದ್ಯಾರ್ಥಿಗಳಿಗೆ ಜಯ ಸಿಗುವ ದಿನ, ಅಂದುಕೊಂಡ ಕೆಲಸ ಸಲೀಸಾಗಿ ಪೂರ್ಣಗೊಳ್ಳಲಿವೆ

