ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಂ ಘಟನೆಯ ಬಳಿಕ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಸಂಬಂಧಗಳಲ್ಲಿ ಮತ್ತೆ ಒತ್ತಡದ ವಾತಾವರಣ ನಿರ್ಮಾಣವಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡದೊಂದಿಗೆ ಹಸ್ತಲಾಘವ ಮಾಡದಿರಲು ಬಿಸಿಸಿಐ ತೀರ್ಮಾನಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಹಾಗೂ ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ, ಈ ವಿಚಾರದಲ್ಲಿ ಪಾಕಿಸ್ತಾನಕ್ಕೆ ಯಾವುದೇ ಚಿಂತೆ ಇಲ್ಲ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನಖ್ವಿ, ಭಾರತ ಹ್ಯಾಂಡ್‌ಶೇಕ್ ಮಾಡದಿರಲು ನಿರ್ಧರಿಸಿದರೆ ಅದಕ್ಕೆ ನಮಗೆ ಯಾವುದೇ ಅಭ್ಯಂತರವಿಲ್ಲ. ಅವರೊಂದಿಗೆ ಕೈ ಕುಲುಕಲು ನಮಗೂ ಆಸಕ್ತಿ ಇಲ್ಲ.
ಮುಂದಿನ ಟೂರ್ನಿಗಳಲ್ಲೂ ಭಾರತ ಇದೇ ನಿಲುವು ಮುಂದುವರೆಸಿದರೆ, ಪಾಕಿಸ್ತಾನವೂ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತ ಚಾಂಪಿಯನ್ ಆಗಿ 3 ತಿಂಗಳು ಕಳೆದರೂ, ಇನ್ನೂ ಟ್ರೋಫಿ ತಂಡದ ಕೈಸೇರಿಲ್ಲ.

